ಸಂಭಾವ್ಯ ಸಚಿವರ ಪಟ್ಟಿ : ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಯಾರಾಗ್ತಾರೆ ಮಂತ್ರಿ!
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಲಿದ್ದು ನಾಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಹಾಗೂ ಬಿಜೆಪಿ ಅದ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿನ ನೆರೆ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಅನುದಾನದ ಬಗ್ಗೆ ಚರ್ಚಿಸಲಿದ್ದಾರೆ. ಅಂತೆಯೇ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚಿಸಿ ಅಂತಿಮ ಪಟ್ಟಿಗೆ ಒಪ್ಪಿಗೆ ಪಡೆದು ಬರಲಿದ್ದಾರೆ ಎನ್ನಲಾಗಿದೆ. ಸದ್ಯ ಯಡಿಯೂರಪ್ಪ ಸಂಪುಟ ಸಚಿವರ ಸಂಭಾವ್ಯ ಪಟ್ಟಿ ಇಂತಿದೆ ಎಂದು ತಿಳಿದು ಬಂದಿದೆ.
ಆರ್ .ಅಶೋಕ್, ಸುರೇಶ್ ಕುಮಾರ್, ಡಾ.ಅಶ್ವಥ್ ನಾರಾಯಣ, ಕೆ.ಎಸ್.ಈಶ್ವರಪ್ಪ, ಜೆ.ಸಿ.ಮಾಧುಸ್ವಾಮಿ, ಸುನೀಲ್ ಕುಮಾರ್, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಎಸ್.ಅಂಗಾರ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಎಂ.ಚಂದ್ರಪ್ಪ, ಎಸ್.ಎ.ರಾಮದಾಸ್, ಕೆ.ಜಿ.ಭೋಪಯ್ಯ, ಜಿ.ಕರುಣಾಕರರೆಡ್ಡಿ, ಶಿವನಗೌಡ ನಾಯಕ್, ಬಾಲಚಂದ್ರ ಜಾರಕಿ ಹೊಳಿ, ರಾಜೂಗೌಡ, ಕಳಕಪ್ಪ ಬಂಡಿ, ದತ್ತಾತ್ರೇಯ ಪಾಟೀಲ್, ವಿಧಾನ ಪರಿಷತ್ ನಿಂದ ಕೋಟಾ ಶ್ರೀನಿವಾಸ್ ಪೂಜಾರಿ, ರವಿಕುಮಾರ್ ಅವರ ಹೆಸರು ನೂತನ ಸಚಿವರ ಪಟ್ಟಿಯಲ್ಲಿದೆ ಎನ್ನಲಾಗುತ್ತಿದೆ.