ಪ್ರಮುಖ ಸುದ್ದಿ
ಅಲೋಕ ಕುಮಾರ್ ವರ್ಗಾವಣೆ: ನಗರ ಪೊಲೀಸ್ ಆಯುಕ್ತರಾಗಿ ಬಾಸ್ಕರ್ ರಾವ್ ನೇಮಕ
ಬೆಂಗಳೂರು : ಯಡಿಯೂರಪ್ಪ ಸರ್ಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆಗೊಳಿಸಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದ್ದು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ಬೆಂಗಳೂರು ಮೂಲದ ಬಾಸ್ಕರ್ ರಾವ್ ಅವರನ್ನು ನೇಮಿಸಿ ಆದೇಶಿಸಿದೆ. ಸಂಜೆ ವೇಳೆ ಅಲೋಕ್ ಕುಮಾರ್ ಅನುಪಸ್ಥಿತಿಯಲ್ಲೇ ಬಾಸ್ಕರ್ ರಾವ್ ನಗರ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.