ಪ್ರಮುಖ ಸುದ್ದಿ
ಯುಪಿಎ ಸರ್ಕಾರವಿದ್ದಾಗ ಪರಿಹಾರ ಎಷ್ಟು ಕೊಟ್ಟಿದೆ ಗೊತ್ತಾ.?
ವಿವಿ ಡೆಸ್ಕ್ಃ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಆಗಲೂ ಸಿಎಂ ಯಡಿಯೂರಪ್ಪನವರೇ ಇದ್ದರು. ಆಗ ಉಂಟಾದ ನೆರೆ ಪರಿಹಾರ ಸಂದರ್ಭ ಆಗಿನ ಸಿಎಂ ಇದೇ ಯಡಿಯೂರಪ್ಪನವರು 18 ಸಾವಿರ ಕೋಟಿ ನೆರೆ ಪರಿಹಾರ ಕೇಳಿ ವರದಿ ಸಲ್ಲಿಸಿದ್ದರು ಆಗಿನ ಯುಪಿಎ ಸರ್ಕಾರ ಪರಿಹಾರ ಹಣ ಎಷ್ಟು ಕೊಟ್ಟಿದೆ ಗೊತ್ತೇ.? ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಿದ್ರಾಮಯ್ಯನವರಿಗೆ ಪ್ರಶ್ನೆ ಮಾಡಿದ್ದಾರೆ.
ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇವಲ 700 ಕೋಟಿ ಬಿಡುಗಡೆ ಮಾಡಿತ್ತು. ಈ ವಿಷಯ ಮಾಜಿ ಸಿಎಂ ಸಿದ್ರಾಮಯ್ಯನವರಿಗೆ ಗೊತ್ತಿಲ್ಲವೇ.? ಎಂದು ಪ್ರಶ್ನಿಸಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.