ಅಂಗನವಾಡಿ ನೌಕರರಿಗೆ ಆರೋಗ್ಯ ಇಲಾಖೆಯಿಂದ ಕಿಟ್ ವಿತರಣೆ
ಶಹಾಪುರಃ ಕೊರಾನ್ ವೈರಸ್ ಹಾವಳಿಯಿಂದಾಗಿ ಲಾಕ್ ಡೌನ್ ಹಿನ್ನೆಲೆ ವಿವಿಧ ಕೆಲಸಗಳಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಅಂಗನವಾಡಿ ಕಾರ್ಯಕರ್ತರಿಗೆ ಇಲ್ಲಿನ ತಾಲೂಕು ಆರೋಗ್ಯ ಇಲಾಖೆಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ಹಾಗೂ ಇತರೆ ಸಲಕರಣೆಯ ಕಿಟ್‍ನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ವಿತರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾದಗಿರಿ ಜಿಲ್ಲೆ ಕೊರೊನಾ ಸೋಂಕು ತಡೆಗೆ ವೈದ್ಯಕೀಯ, ಪೊಲೀಸ್ ಮತ್ತು ಕಾರ್ಮಿಕ ಇಲಾಕೆ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತರು ಸಹ ಶ್ರಮವಹಿಸುತ್ತಿದ್ದು, ಅವರ ಆರೋಗ್ಯದ ಬಗ್ಗೆಯು ಮನ್ನೆಚ್ಚರಿಕೆವಹಿಸಬೇಕು. ಆ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರಿಗೂ ಸ್ಯಾನಿಟೈಸರ್ ಮತ್ತು ಇತರೆ ಸಲಕರಣೆಗಳ ಕಿಟ್ ನೀಡಲಾಗಿದೆ,
ಸಾರ್ವಜನಿಕರು ಈ ಎಲ್ಲಾ ಮಹನೀಯರ ಶ್ರಮಕ್ಕೆ ಬೆಲೆ ನೀಡಬೇಕು. ಸೇವೆಗೆ ಸಹಕಾರ ನೀಡುವ ಮೂಲಕ ಮಹಾಮಾರಿ ಕೊರೊನಾ ತಡೆಗೆ ಕೈಜೋಡಿಸಬೇಕು. ಸರ್ಕಾರ ಸೂಚಿಸಿದ ನಿಯಮಗಳನ್ನು ಎಲ್ಲರೂ ಚಾಚು ತಪ್ಪದೆ ಪಾಲನೆ ಮಾಡಬೇಕು. ಯಾರೊಬ್ಬರು ಮನೆಯಿಂದ ಹೊರಗಡೆ ಬರಬಾರದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ, ತಹಸೀಲ್ದಾರ ಜಗನ್ನಾಥರಡ್ಡಿ, ಡಾ.ಮಲ್ಲಪ್ಪ ಕಣಜಿಗಿಕರ್, ವಸಂತ ಸುರಪುರಕರ್, ಭೀಮರಾಯ ಕದರಾಪುರ ಸೇರಿದಂತೆÀ ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.




