ಸೃಷ್ಠಿಯಲ್ಲಿ ಹೆಣ್ಣು ಮಕ್ಕಳೆ ಶ್ರೇಷ್ಠ – ಶ್ರೀ ವೀರೇಶ್ವರ ಸ್ವಾಮಿಗಳು
ಯಾದಗಿರಿ: ರವಿವಾರ ಯಾದಗಿರಿಯ ಪ್ರಾದೇಶಿಕ ಬಸ್ ಕಾರ್ಯಾಗಾರ ಹತ್ತಿರ ಇರುವ ಸದ್ಗುರು ಶ್ರೀ ದಾಸಬಾಳ ವೀರೇಶ್ವರಮಠದಲ್ಲಿ 102 ನೇ ಶಿವಾನುಭವ ಗೋಷ್ಠಿ ಹಾಗೂ ಮೌನ ಅನುಷ್ಠಾನ ಮಹಾ ಮಂಗಲ ಕಾರ್ಯಕ್ರಮವು ಸದ್ಗುರು ಶ್ರೀ ವೀರೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಜರಗಿತು.
ಪ್ರತಿ ತಿಂಗಳದಂತೆ ಈ ಭಾರತ ಹುಣ್ಣಿಮೆಗೂ ಕೂಡ ಶಿವಾನುಭವ ಗೋಷ್ಠಿಯಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿದ ನೂರಾರು ಭಕ್ತರನ್ನು ಉದ್ದೇಶಿಸಿ ಮಾತನ್ನಾಡಿದ ಸದ್ಗುರು ಶ್ರೀ ವೀರೇಶ್ವರ ಸ್ವಾಮಿಗಳು ಸೃಷ್ಠಿಯಲ್ಲಿ ಹೆಣ್ಣು ಮಕ್ಕಳೇ ಶ್ರೇಷ್ಠ ಎಂದು ನುಡಿದು ಅದಕ್ಕೆ ಸರಿಯಾಗಿ ಅರ್ಥಕೂಡ ನೀಡಿದರು.
ಹೆಣ್ಣು ಮಕ್ಕಳಿಗೆ ಹುಟ್ಟಿದ 7 ವರ್ಷದಿಂದ ಇಡಿದು 14 ವರ್ಷ ವೃತುಮತಿಯಾದಗ ಹಾಗೂ ಗಂಡನ ಮನೆಗೆ ಹೋಗುವಾಗ ಅದ್ದೂರಿಯಾಗಿ ಕಳಿಸಿಕೊಟ್ಟು ತದನಂತರ ಮತ್ತೆ ಆ ಹೆಣ್ಣು ಮಗಳು ಗರ್ಭಿಣಿಯಾದಗ ವಿವಿಧ ಬಗೆಯ ತಿಂಡಿಗಳೊಂದಿಗೆ ತವರು ಮನೆಯವರು ಬಂದು ತನ್ನಿಸಿ ಸಂತೋಷ ಪಡಿಸುತ್ತಾರೆ ಇಂತಹ ಭಾಗ್ಯ ಇರೋದು ಹೆಣ್ಣಿಗೆ ಮಾತ್ರ ಈ ಕಾರಣದಿಂದ ಹೆಣ್ಣುಮಕ್ಕಳು ಶ್ರೇಷ್ಠರು ಹಾಗೂ ಪುಣ್ಯವಂತರು ಎಂದು ಅರ್ಥನೀಡಿದರು.
ಇಲ್ಲಿ ಎಲ್ಲಾಜಾತಿಯ ಜನರು ಒಂದೆ ಯಾರು ಮೇಲುಕೀಳಲ್ಲ ಎಂಬ ಮಾತು ಕೂಡ ಸಾರಿ ಬಂದ ಭಕ್ತರ ಹಣೆಗೆ ವೀಭೂತಿದರಿಸಿ ಆಶೀರ್ವಾದ ಮಾಡಿದರು ಹಣೆಯ ಮೇಲೆ ವೀಭೂತಿ ದಾರಣೆಯಿಂದ ಹಾಗೂ ಸಾದು ಸತ್ಪೂರಿಸರ ಪಾದಕ್ಕೆ ನಮಸ್ಕರಿಸುವದರಿಂದ ಭವ ರೋಗ ಮುಕ್ತರಾಗಬಹುದು ಎಂದು ಶ್ರೀಗಳು ಹೇಳಿದರು.
ಭಾರತ ಹುಣ್ಣಿಮೆ 102ನೇ ಮಾಸಿಕ ಶಿವಾನುಭವ ಮೌನ ಅನುಷ್ಠಾನ ಮಂಗಲ ಕಾರ್ಯಕ್ರಮದಲ್ಲಿ 5 ದಿನಗಳ ಕಾಲ ಮೌನ ಅನುಷ್ಠಾನಗೈದ ವೇದಮೂರ್ತಿ ಶ್ರೀ ಬನ್ನಯ್ಯಸ್ವಾಮಿ ಜೋಳದಡಿಗಿ ತಾ/ವಡಗೇರಾ ಮತ್ತು ಶ್ರೀ ಬಸ್ಸಯ್ಯಸ್ವಾಮಿ ಯರಮರಸ್ ( ರಾಯಚೂರು ) ಇವರಿಗೆ ಶ್ರೀ ಗಳಿಂದ ಸನ್ಮಾನಿಸಲಾಯಿತು. ಮಠಕ್ಕೆ ಬಂದ ಭಕ್ತಾದಿಗಳಿಗೆ ಹುಗ್ಗಿ, ಅನ್ನ ಸಾಂಬರ ಪ್ರಸಾದದ ವ್ಯವಸ್ತೆಯನ್ನು ಚಿನ್ನಕರ ಗ್ರಾಮದ ಸುಭಾಸ್ ರಡ್ಡಿ, ಸಿದ್ರಾಮರಡ್ಡಿಯವರು ಮಾಡಿದರು.
102ನೇ ಶಿವಾನುಭವ ಗೋಷ್ಠಿಯಲ್ಲಿ ನಿವೃತ್ತ ಪ್ರಾಚಾರ್ಯರಾದ ಎಸ್,ಎಸ್, ಜೂಗೇರಿ ಹಾಗೂ ಕೀರ್ತನ ಕೇಸರಿ ಪ್ರವಚನಕಾರರಾದ ವೇದಮೂರ್ತಿ ನಾಗಯ್ಯಶಾಸ್ತ್ರಿಯವರು ಮತ್ತು ಬಸವರಾಜ ಬಿಳ್ಹಾರ, ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಬಸವರಾಜ ಹೀರೆಮಠ ದೇವು ವಿಶ್ವಕರ್ಮ, ಬನ್ನಯ್ಯ ಸ್ವಾಮಿ ಜೋಳದಡಿಗಿ,ರಾಚಯ್ಯ ಸ್ವಾಮಿ ಚೆನ್ನೂರು ಇನ್ನಿತರು ಹಾಜರಿದ್ದರು.




