BAD NEWS ರಮೇಶ ಮುಶಿಗೇರಿ ಇನ್ನಿಲ್ಲಾ
ಬೆಂಬಿಡದ ನೋವಿಗೆ DONT CARE ಅಂದ್ಕೊಂಡು ಜೀವಿಸಿದ್ದ..!
ಶಹಾಪುರಃ ಪಟ್ಟಣದ ದೇವಿ ನಗರದ ನಿವಾಸಿ ರಮೇಶ ಮುಶಿಗೇರಿ (35) ರವಿವಾರ ನಿಧನರಾದರು ಎಂದು ತಿಳಿಸಲು ವಿಷಾಧಿಸುತ್ತೇವೆ.
ಮೃತ ರಮೇಶ, ಪತ್ನಿ, ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ನಗರದ ಯುವ ಸಮೂಹದಲ್ಲಿ ಗುರುತಿಸಿಕೊಂಡಿದ್ದ ಈತ.
ಹಲವಾರು ವರ್ಷಗಳಿಂದ ಅನಾರೋಗ್ಯ ಹೊಂದಿದ್ದರೂ ನಿರಂತರವಾಗಿ ಸೂಕ್ತ ಚಿಕಿತ್ಸೆ ಪಡೆಯವ ಮೂಲಕ ಸಾರ್ವಜನಿಕ ವಲಯದಲ್ಲಿ ತನಗೇನು ಆಗಿಲ್ಲ ಎಂಬಂತೆ ಜೀವಿಸುತ್ತಿದ್ದ ಆತನ ಧೈರ್ಯ ಒಂದು ರೀತಿ ಮೆಚ್ಚುವಂತಹದ್ದು, ಆತನ ಸ್ನೇಹಿತರಿಗೆ ಬಿಟ್ಟರೆ ಮನೆಯವರಿಗೆ ಮಾತ್ರ ಆತನ ನೋವು ತಿಳಿದಿತ್ತು ಎನ್ನಬಹುದು.
ಎಲ್ಲೂ ಆತ ತನ್ನ ರೋಗಬಾಧೆ ಕುರಿತು ಚಿಂತಿತ ಮಾತುಗಳನ್ನಾಡದೆ ತನಗೇನು ಹಾಗಿಲ್ಲ ಎಂಬಂತೆ ವರ್ತಿಸುತ್ತಿದ್ದ, ಮೊಬೈಲ್ ಅಂಗಡಿಯಲ್ಲಿ ವ್ಯಾಪಾರ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದ. ಆದರೆ ತನ್ನನ್ನು ತಾನೇ ಕೇರ್ ತೆಗೆದುಕೊಳ್ಳದ ಹೊಂಬ ಬುದ್ಧಿಯಿಂದ ಇಡಿ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ. ಪ್ರಾಥಮಿಕ ಹಂತದ ಚಿಕಿತ್ಸೆ ನಡೆದಾಗಲೇ ವೈದ್ಯರು ನೀಡಿದ ಸಲಹೆಯನ್ನು ಶಿರಸಾ ಪಾಲಿಸಿದ್ದರೆ ಇಂದು ಬದುಕುಳಿಯುತ್ತಿದ್ದನೇನು ಎಂಬ ಭರವಸೆ ಎಲ್ಲರನ್ನೂ ಕಾಡುತ್ತಿದೆ
ಈಚೆಗೆ ಕೆಲ ದಿನಗಳಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಸೂಕ್ತ ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದ ಈತ. ಶಸ್ತ್ರ ಚಿಕಿತ್ಸೆ ನಂತರ ಎರಡು ದಿನ ಸ್ಪಂಧಿಸಿದ ರಮೇಶ ಮುಶಿಗೇರಿ ರವಿವಾರ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯೇಜಿಸಿದ್ದಾರೆ ಎಂಬುದೇ ದುಖಃಕರ.
ಸೋಮವಾರ ಬೆಳಗ್ಗೆ ನಗರಕ್ಕೆ ಮೃತ ದೇಹ ಬರುವ ನಿರೀಕ್ಷೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಸೋಮವಾರ ಚರಬಸವೇಶ್ವರ ಗದ್ದುಗೆಗೆ ಹೋಗುವ ಮಾರ್ಗದಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೇ ಜರುಗಲಿದೆ ಎಂದು ಮೂಲಗಳು ತಿಳಿಸಿವೆ. ದೇವರು ಅವರ ಕುಟುಂಬಕ್ಕೆ ಕಷ್ಟವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಹಾರೈಸುವ..!