ಪ್ರಮುಖ ಸುದ್ದಿ

ಕನ್ನಡ ಭಾಷೆ ಹೆಚ್ಚು ಬಳಕೆಗೆ ರಣಧೀರ ಪಡೆ ಆಗ್ರಹ

 

ಯಾದಗಿರಿಃ ಕಾರ್ಖಾನೆ, ವಾಣಿಜ್ಯ ಮಳಿಗೆಗಳು ಹಾಗೂ ಹೊಟೇಲ್ ಮತ್ತು ಶಾಲೆಗಳಲ್ಲಿ ವ್ಯವಹಾರಿಕವಾಗಿ ಕನ್ನಡ ಭಾಷೆ ಬಳಸುವಂತೆ ಆಗ್ರಹಿಸಿ ಇಲ್ಲಿನ ಕನ್ನಡ ರಣಧೀರ ಪಡೆ ಕಾರ್ಯಕರ್ತರು ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡ ರಣಧೀರ ಪಡೆ ರಾಜ್ಯ ಘಟಕ ರಾಜ್ಯಾದ್ಯಂತ ವ್ಯವಹಾರಿಕವಾಗಿ ಶೇ.60 ರಷ್ಟು ಕನ್ನಡ ಭಾಷೆ ಬಳಸಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ತಾಲೂಕು ರಣಧೀರ ಪಡೆ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು.

ರಾಜ್ಯದಲ್ಲಿರುವ ಖಾಸಗಿ ವಿದ್ಯಾಸಂಸ್ಥೆಗಳು, ವಾಣಿಜ್ಯ ಮಳಿಗೆಗಳು ಹಾಗೂ ಕಾರ್ಖಾನೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸಬೇಕು. ಅಲ್ಲದೆ ವ್ಯವಹಾರಿಕವಾಗಿಯೂ ಅಂದರೆ ಯಾವುದೇ ನೋಟಿಸ್, ಬಿಲ್, ಪ್ರವೇಶಾತಿ ಪಡೆಯವುಆಗ ಮತ್ತು ಇತರೆ ರಿಸಿಪ್ಟ್ ಎಲ್ಲವೂ ಕನ್ನಡದಲ್ಲಿರಬೇಕು ಶೇ.60% ರಷ್ಟು ಕನ್ನಡ ಭಾಷೆ ಬಳಸಬೇಕೆಂದು ರಾಜ್ಯ ಸರ್ಕಾರ ಶಿಸ್ತು ಬದ್ಧ ಆದೇಶ ನೀಡಿದ್ದು, ಅದರಂತೆ ರಾಜ್ಯದಲ್ಲಿ ಕನ್ನಡ ಭಾಷೆ ಬಳಸಲೇಬೇಕು.

ಕನ್ನಡದ ನೆಲದಲ್ಲಿ ಜನ್ಮಿಸಿ, ವ್ಯವಹಾರ ಮಾಡಿ ಬದುಕು ಸಾಗಿಸುವ ಉದ್ಯಮಗಳು ಕನ್ನಡವನ್ನು ಮರೆಮಾಚುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಾಜ್ಯ ಸರ್ಕಾರ ಆದೇಶದಂತೆ ಎಲ್ಲಾ ಕಂಪನಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಭಾಷೆ ಬಳಕೆ ಮಾಡಬೇಕೆಂದು ಒತ್ತಾಯಿಸಿದರು.

ಅಲ್ಲದೆ ನಗರದ ಮಳಿಗೆಗಳ ಮೇಲೆ ಕನ್ನಡದಲ್ಲಿಯೇ ಹೆಸರನ್ನು ಕಡ್ಡಾಯವಾಗಿ ಬರೆಯಬೇಕು. ಸಾಕಷ್ಟು ಅಂಗಡಿಗಳಲ್ಲಿ ಇಂಗ್ಲೀಷ್ ಪದ ಮೊದಲು ಬಳಸಿದ್ದಾರೆ. ಕೂಡಲೇ ಅಂತಹ ಬರಹ ತೆಗೆದು ಮೊದಲ ಆದ್ಯತೆ ಕನ್ನಡಕ್ಕೆ ನೀಡಬೇಕು. ಇಲ್ಲವಾದಲ್ಲಿ ರಣಧೀರ ಪಡೆ ರಸ್ತೆಗಿಳಿದು ಕಪ್ಪು ಮಸಿ ಬಳಿಯಲಿದೆ ಎಂದು ಎಚ್ಚರಿಸಿದರು.
ಮತ್ತು ತಾಲೂಕು ಆಡಳಿತ ವ್ಯವಹಾರಿಕವಾಗಿ ಕನ್ನಡ ಬಳಸದ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ ಮಾರ್ಚಲ್, ಧರ್ಮರಾಜ ಬಿ. ನಾಟೇಕಾರ, ಭೀಮಾಶಂಕರ ಎಚ್. ಕಟ್ಟಿಮನಿ, ಲಕ್ಷ್ಮಣ ಶೆಟ್ಟಿಕೇರಾ, ಹುಸನಪ್ಪ ಗುತ್ತೇದಾರ, ನಾಗು ರಸ್ತಾಪೂರ, ಮಲ್ಲು ಗುಡೇನೋರ, ಭೀಮು ಬಡಿಗೇರ, ಭೀಮು ಕಟ್ಟಿಮನಿ, ಶಿವಶರಣ ಕೊಡಮನಳ್ಳಿ, ರಡ್ಡಿ ಹಳಿಪೇಠ, ಸ್ವಪನೀಲ್, ಶಿವುಕುಮಾರ ಕಟ್ಟಿಮನಿ, ಸಂಜುರಡ್ಡಿ, ಸಿದ್ದು ಕಟ್ಟಿಮನಿ, ಮೌನೇಶ ಗುಂಡಗುರ್ತಿ, ಶರಣು ಸ್ವಾಮಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button