ಪ್ರಮುಖ ಸುದ್ದಿ
ಕಿರಾಣಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ-48 ಲೀ.ಮದ್ಯ ಜಪ್ತಿ
ಅಕ್ರಮ ಮದ್ಯ ಜಪ್ತಿ 16400 ರೂ. ಮೌಲ್ಯದ ಬಾಟಲಿಗಳು ವಶಕ್ಕ
ಯಾದಗಿರಿಃ ಎರಡು ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 48.8 ಲೀಟರ್, ಅಂದಾಜು 16400 ರೂ.ಮೌಲ್ಯದ ಎನ್ನಲಾದ ಅಕ್ರಮ ಮದ್ಯವನ್ನು ಜಪ್ತಿ ಮಾಡಿದ ಘಟನೆ ತಾಲೂಕಿನ ಬಂದಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಎರಡು ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು ಅಕ್ರಮ ಮದ್ಯ ಮಾರಾಅದ ವಿವಿದ ಬ್ರ್ಯಾಂಡ್ ನ ಬಾಟಲಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಆರೋಪಿತರಾದ ಸಿದ್ದಪ್ಪ ತಂದೆ ಗುಂಜಪ್ಪ ಮತ್ತು ಹನುಮಂತ ತಂದೆ ಬಸವರಾಜ ಸಾ.ಬಂದಳ್ಳಿ ಇವರ ಮಾಲೀಕತ್ವದ ಅಂಗಡಿಗಳು ಇವಾಗಿದ್ದು, ಗ್ರಾಮೀಣಾ ಪೊಲೀಸ್ ಠಾಣೆ ವ್ಯಾಪ್ತಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.