ಭಾರತದಲ್ಲಿ ಅತ್ಯಂತ ಬುದ್ಧಿವಂತ ಮತದಾರರು ಹೊಂದಿದ ಕ್ಷೇತ್ರ ಯಾವುದು.?
ಭಾರತದಲ್ಲಿ ಅತ್ಯಂತ ಬುದ್ಧಿವಂತ, ಅಕ್ಷರಸ್ಥರನ್ನು ಹೊಂದಿದ ಲೋಕಸಭಾ ಕ್ಷೇತ್ರ ಯಾವುದು ಗೊತ್ತೆ..?
ವಿನಯವಾಣಿ ಡೆಸ್ಕ್ಃ ಅರರರೇ..ಇದೇನಿದು ಯಾವ ಪ್ರಶ್ನಾ ಪತ್ರಿಕೆಯಲ್ಲಿ ಇಂತಹ ಪ್ರಶ್ನೆ ಕೇಳಿದ್ದಾರೆ.? ಯಾವ ಪರೀಕ್ಷೆಯಲ್ಲಿ ಇದನ್ನು ಕೇಳಿದ್ದಾರೆ..ಯಾವ ವಿಷಯ ಅಲ್ದೆ ಡಿಗ್ರಿ ಪರೀಕ್ಷೆನಾ..ಅಥವಾ ಕಾಲೇಜ್ ಲೇವಲ್ ನ ಪರೀಕ್ಷೆಯೋ ಅಥವಾ ಇನ್ಯಾವ ಪರಿಕ್ಷೆಯಲ್ಲಿ ಈ ಪ್ರಶ್ನೆ ಉದ್ಭವಾಗಿದೆ ಎಂದು ತಲೆಕೆಡಿಸಿಕೊಳ್ಳುತಿದ್ದೀರಾ..?
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಡಿ ಇಂಡಿಯಾದಲ್ಲಿ ಹೆಸರುವಾಸಿಯಾದ ಕರ್ನಾಟಕದ ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದ್ದು,
ಯಾರೋ ಬೆಂಕಿ ಬಸಣ್ಣ ಎಂಬವರು ರಾಜಕೀಯ ಶಾಸ್ತ್ರ ಸಬ್ಜೆಕ್ಟ್ ಎಂದು ಹೆಸರಿಟ್ಟು,
ಪ್ರಶ್ನೆಃ ಭಾರತ ದೇಶದಲ್ಲಿ ಅತ್ಯಂತ ಬುದ್ಧಿವಂತ, ಅಕ್ಷರಸ್ಥರು ಇರುವ ಲೋಕಸಭಾ ಕ್ಷೇತ್ರ ಯಾವುದು..? ಏಕೆ.?
( ಎಂದು ಪ್ರಶ್ನೆ ಹಾಕಿ ಉತ್ತರವು ತಾವೇ ಬರೆದಿಸ್ದಾರೆ ಕೆಲಗಡೆ ಓದಿ)
ಉತ್ತರಃ ಅದು ಮಂಡ್ಯ ಕ್ಷೇತ್ರ. ಏಕೆಂದರೆ ಸುಮಲತಾ ಎಂಬ ಹೆಸರಿನ ನಾಲ್ಕು ಮಹಿಳೆಯರಿದ್ದು, ನಾಲ್ಕು ಜನಕ್ಕೂ ಕನ್ನಡಕ ಹಾಕಿ, ಒಂದೇ ರೀತಿಯ ಸೀರೆ ಉಟ್ಟ ಫೋಟೊ ಹಾಕಿದ್ದರೂ, ಸರಿಯಾದ ಸುಮಲತಾ ಅಂಬರೀಶರನ್ನು ಕಂಡು ಹಿಡಿದು ಮತ ಹಾಕಿ ಭಾರಿ ಅಂತರದಿಂದ ಗೆಲ್ಲಿಸಿರುವದಕ್ಕೆ.!
( ಎಂದು ಪ್ರಶ್ನೆ ಸಮೇತ ಉತ್ತರ ನೀಡುವ ಮೂಲಕ ಮಂಡ್ಯ ಸೇರಿದಂತೆ ಕರ್ನಾಟಕದಾದ್ಯಂತ ವೈರಲ್ ಆಗಿದೆ.)
ಇಂತಹ ಪ್ರಶ್ನೆ ಉದ್ಭವವಾಗಿರೋದೋ ಮಂಡ್ಯದಲ್ಲಿ ಈ ಪ್ರಶ್ನೆ ಜನ್ಮ ತಾಳಿದಕ್ಕೆ ಯಾವುದೆ ಮಾತಿಲ್ಲ. ಬೆಂಕಿ ಬಸಣ್ಣ ಎನ್ನುವರು ಇಂತಹ ವಿಚಿತ್ರ ಪ್ರಶ್ನೆ ರೂಪಿಸಿದ್ದು, ನಿಜಕ್ಕೂ ಸರಿ ಇದೆ ಅನಿಸುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾಂಪ್ಟೇಟಿವ್ ಎಕ್ಸಾಮ್ ನಡೆಯುತ್ತಿದ್ದರೆ ಇಂತಹ ಪ್ರಶ್ನೆ ಕೇಳಿದರೂ ಅಚ್ವರಿ ಪಡುವಂತಿಲ್ಲ ಎನ್ನುತ್ತಿದ್ದಾರೆ ಮಂಡ್ಯದ ಜನನಸುನಗುತ್ತಾ…