ಪ್ರಮುಖ ಸುದ್ದಿ
ವಿದ್ಯುತ್ ಸ್ಪರ್ಶ ಲೈನ್ ಮ್ಯಾನ್ ಸಾವು
ವಿದ್ಯುತ್ ಸ್ಪರ್ಶ ಲೈನ್ ಮ್ಯಾನ್ ಸಾವು
ಶಹಾಪುರಃ ವಿದ್ಯುತ್ ಕಂಬದ ಮೇಲೇರಿ ವಿದ್ಯುತ್ ಸರಬರಾಜು ಲೈನ್ ಚಕ್ ಮಾಡುವಾಗ, ವಿದ್ಯುತ್ ಹರಿದು ವೃತ್ತಿನಿರತ ಯುವ ಲೈನ್ ಮ್ಯಾನ್ ಸಾವನ್ನಪ್ಪಿದ ಘಟನೆ ನಡೆದಿದೆ.
ಲೈನ್ ಮ್ಯಾನ್ ಚಂದ್ರು ತಂದೆ ಸಂಗಣ್ಣ ಸಾ.ಉಕ್ಕಿನಾಳ (22) ಮೃತ ದುರ್ದೈವಿ. ತಾಲೂಕಿನ ಹಯ್ಯಾಳ(ಬಿ) ಗ್ರಾಮದಲ್ಲಿ ವಿದ್ಯುತ್ ಸರಬರಾಜು ದುರಸ್ತಿಗೊಳಿಸುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ತಾಲೂಕಿನ ಉಕ್ಕಿನಾಳ ಗ್ರಾಮದವರೆನ್ನಲಾದ ಹಯ್ಯಾಳ(ಬಿ) ವಿಭಾಗದಲ್ಲಿ ಲೈನ್ ಮ್ಯಾನ್ ಹುದ್ದೆಯಲ್ಲಿ ಈತ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ