ಪ್ರಮುಖ ಸುದ್ದಿ
ಮಹಾರಾಷ್ಟ್ರ ಸಿಎಂ ಮಾತು ಕೇಳಿ ಶಾಕ್ ಆದ ಸಿಎಂ ಯಡಿಯೂರಪ್ಪ!
ಬೆಂಗಳೂರು: ಮಹಾರಾಷ್ಟ್ರ ರಾಜ್ಯದಲ್ಲಿ ಮೇಘಸ್ಪೋಟ ಆಗುತ್ತಿದ್ದು ಕೊಯ್ನಾ ಡ್ಯಾಮ್ ಅಪಾಯದ ಮಟ್ಟ ಮೀರಿದೆ. ಪರಿಣಾಮ ಮತ್ತೆ 5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೊಳಿಸುವುದಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಕರ್ನಾಟಕ ಸಿಎಂ ಯಡಿಯೂರಪ್ಪ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮಹಾರಾಷ್ಟ್ರ ಸಿಎಂ ಮಾತು ಕೇಳಿ ಶಾಕ್ ಆದ ಬಿ.ಎಸ್.ಯಡಿಯೂರಪ್ಪ ಮಾರುತ್ತರ ನೀಡಲಾಗದೆ ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರ ಸಿಎಂ ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಕೊಯ್ನಾ ಡ್ಯಾಮ್ ನಿಂದ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಉತ್ತರ ಕರ್ನಾಟಕದ ನದಿಪಾತ್ರದ ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗುವ ಭೀತಿ ಎದುರಾಗಿದೆ.