ಪ್ರಮುಖ ಸುದ್ದಿ
ಮತ್ತೆ ಬರಲಿದೆ ಅಸೆಂಬ್ಲಿ ಚುನಾವಣೆ -ಸಿದ್ರಾಮಯ್ಯ
ಈ ಸರ್ಕಾರಕ್ಕೆ ಆಯುಷ್ಯ ಕಡಿಮೆ-ಸಿದ್ರಾಮಯ್ಯ.
ಚಿಕ್ಕಮಗಳೂರುಃ ವಿಧಾನಸಭೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಈ ಸರ್ಕಾರದ ಆಯುಷ್ಯ ಕಡಿಮೆ ಇದೆ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವದು ಒಳಿತು ಎಂದು ಮಾಜಿ ಸಿಎಂ ಸಿದ್ರಾಮಯ್ಯ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಕಡೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಸೆಂಬ್ಲಿ ಚುನಾವಣೆಗೆ ಚುನಾವಣೆ ಆಯೋಗ ಸಿದ್ಧತೆ ಮಾಡಿಕೊಳ್ಳುವ ಲಕ್ಷಣಗಳು ಗೊಚರಿಸುತ್ತಿವೆ.
ರಾಜ್ಯ ಸರ್ಕಾರ ಇನ್ನೂ ಪೂರ್ಣ ಪ್ರಮಾಣದಿಂದ ಕೂಡಿಲ್ಲ. ಚುನಾವಣೆ ಯಾವಾಗ್ ಬೇಕಾದರೂ ಬರಬಹುದು ಎಂದಿದ್ದಾರೆ.