ಜನಮನಪ್ರಮುಖ ಸುದ್ದಿ
ಕೋಟೆನಾಡಿನ ಹಿರಿಯ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಮಂತ್ರಿ ಕನಸು!
ಚಿತ್ರದುರ್ಗ: ಸೋಮವಾರಕ್ಕೆ ಸಮ್ಮಿಶ್ರ ಸರ್ಕಾರ ಅಂತ್ಯ ಕಾಣಲಿದ್ದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗುವುದು ಖಚಿತ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ಹಿರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ. ವಿಶ್ವಾಸಮತ ವೇಳೆ ಒಟ್ಟಿಗೆ ಇರಲು ರೆಸಾರ್ಟಿನಲ್ಲಿದ್ದೇವೆ. ರಾಜ್ಯ ನಾಯಕರ ಅನುಮತಿ ಪಡೆದು ಇಂದು ಕ್ಷೇತ್ರಕ್ಕೆ ಬಂದಿದ್ದೇನೆ. ಸಂಜೆ ವೇಳೆಗೆ ಬೆಂಗಳೂರಿಗೆ ತೆರಳುತ್ತೇನೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ.
ಆರು ಸಲ ಶಾಸಕನಾಗಿರುವ ನಾನು ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗುವ ಅಪೇಕ್ಷೆ ಹೊಂದಿದ್ದೇನೆ. ರಾಜ್ಯದಲ್ಲಿ ಮತ್ತು ಬಿಜೆಪಿಯ ಹಿರಿಯ ಶಾಸಕರಲ್ಲಿ ನಾನು ಒಬ್ಬನಾಗಿದ್ದೇನೆ. ಹಿಂದುಳಿದ ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ನನಗೆ ಮಂತ್ರಿ ಸ್ಥಾನ ನೀಡುವ ಭರವಸೆಯಿದೆ. ಕೇಂದ್ರ ಮತ್ತು ರಾಜ್ಯದ ನಮ್ಮ ನಾಯಕರು ಈಸಲ ನನಗೆ ಮಂತ್ರಿ ಸ್ಥಾನ ನೀಡಿ ನ್ಯಾಯ ಒದಗಿಸುತ್ತಾರೆಂಬ ವಿಶ್ವಾಸವಿದೆ ಎಂದು ತಿಪ್ಪಾರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.