ಪ್ರಮುಖ ಸುದ್ದಿ

ಮೆಡಿಕಲ್ ಕಾಲೇಜುಃ ಯಾದಗಿರಿ ಬಂದ್ ಯಶಸ್ವಿ

ಬಿಜೆಪಿಯಿಂದ ಕರೆ ನೀಡಿದ್ದ ಯಾದಗಿರಿ ಬಂದ್

ವಿವಿಧ ಸಂಘಟನೆಗಳಿಂದ ಸಾಥ್

ಯಾದಗಿರಿಃ ನಗರದಲ್ಲಿ ಮೆಡಿಕಲ್ ಕಾಲೇಜು ಅಗತ್ಯವಿದೆ ಎಂಬುದನ್ನು ಸರ್ಕಾರಕ್ಕೆ ಮುಟ್ಟಿಸಲು ಇಲ್ಲಿನ ಬಿಜೆಪಿ ಕರೆ ನೀಡಿದ್ದ ಯಾದಗಿರಿ ಬಂದ್ ಯಶಸ್ವಿಯಾಗಿದೆ.

ಬಂದ್‍ನಲ್ಲಿ ಬಿಜೆಪಿ ಜೊತೆ ವಿವಿಧ ಸಂಘ ಸಂಘಟನೆಗಳು ಸಹ ಭಾಗವಹಿಸಿದ್ದು, ಯಾದಿಗಿರಿಗೆ ಮೆಡಿಕಲ್ ಕಾಲೇಜು ಅಗತ್ಯವಾಗಿ ಬೇಕು. ಸಿಎಂ ಕುಮಾರಸ್ವಾಮಿ ಈಚೆಗೆ ಗುರುಮಠಕಲ್ ತಾಲೂಕಿನ ಚಂಡ್ರಕಿ ಗ್ರಾಮದಲ್ಲಿ ನಡೆಸಿದ ಗ್ರಾಮ ವಾಸ್ತ್ಯವ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಯಾದಗಿರಿಗೆ ವೈದ್ಯಕೀಯ ಕಾಲೇಜು ಅಗತ್ಯತೆ ಇಲ್ಲ ಎಂದು ಕಡೆಗಣಿಸಿರುವದನ್ನು ಈ ಸಂದರ್ಭದಲ್ಲಿ ಖಂಡಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಶಾಸಕ ವೆಂಕಟರಡ್ಡಿ ಮುದ್ನಾಳವಹಿಸಿದ್ದರು. ಬೆಳಗ್ಗೆ 8 ಗಂಟೆಯಿಂದಲೇ ಪ್ರತಿಭಟನೆ ಬಿಸಿ ತಟ್ಟಿದ್ದುಮ ಇಡಿ ನಗರ ಸ್ತಬ್ಧವಾಗಿತ್ತು. ಆಟೋ, ಅಂಗಡಿ ಮುಂಗಟ್ಟು ಮತ್ತು ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು ಸೇರಿದಂತೆ ಸರ್ಕಾರಿ ಬಸ್ ಸಂಚಾರವು ಬಹುತೇಕ ಬಂದ್ ಆಗಿತ್ತು.

ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಪ್ರಮುಖರು ಭಾಗವಹಿಸಿದ್ದರು. ಕರವೇ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕವು ಪ್ರತಿಭಟನೆ ನಡೆಸಿದರು.

 

Related Articles

Leave a Reply

Your email address will not be published. Required fields are marked *

Back to top button