ವರುಣ WEDS ವರ್ಷಾ ಶಾಸ್ತ್ರೋಕ್ತ ಮದುವೆ ಯಾರಿವರು ಗೊತ್ತೆ.?
ವರುಣ ವೆಡ್ಸ್ ವರ್ಷ ಉಡುಪಿಯಲ್ಲಿ ಶಾಸ್ತ್ರೋಕ್ತ ಕಪ್ಪೆ ಮದುವೆ.!
ಉಡುಪಿಃ ರಾಜ್ಯದಾದ್ಯಂತ ಮಳೆಯ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿವಿಧೆಡೆ ವರುಣನ ಆಗಮನಕ್ಕಾಗಿ ವಿವಿಧ ದೇವಸ್ಥಾನಗಳಲ್ಲಿ ಪ್ರಾರ್ಥನೆ, ಹೋಮ ಹವನ ನಡೆಯುತ್ತಿದೆ.
ಅದರೊಂದಿಗೆ ಶನಿವಾರ ನಗರದಲ್ಲಿ ಮಂಡೂಕ ಪರಿಣಯ (ಕಪ್ಪೆ ಮದುವೆ) ಶಾಸ್ತ್ರೋಕ್ತವಾಗಿ ಜರುಗಿತು. ಹೆಣ್ಣು ಕಪ್ಪೆಯನ್ನು ಸಮೀಪದ ಕೊಳಲಗಿರಿ ಕೀಳಿಂಜೆಯಿಂದ ಹಾಗೂ ಗಂಡು ಕಪ್ಪೆಯನ್ನು ಉಡುಪಿ ಕಲ್ಸಂಕದಿಂದ ತರಲಾಗಿತ್ತು.
ಹೆಣ್ಣು ಕಪ್ಪೆಗೆ ವರ್ಷಾ ಎಂದೂ, ಗಂಡು ಕಪ್ಪೆಗೆ ವರುಣ ಎಂದೂ ನಾಮಕರಣ ಮಾಡಲಾಗಿತ್ತು. ಅಲ್ಲದೆ ಮಳೆಗಾಗಿ ಪ್ರಾರ್ಥನೆಯೇ ಉಡುಗೊರೆ ಎಂಬ ಒಕ್ಕಣೆ ಬರೆದ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.
ಎರಡು ಕಪ್ಪೆ ಕಡೆ ಮಹಿಳೆಯರು ವರ ಮತ್ತು ವಧುವಿನ ಕಡೆ ಜವಬ್ದಾರಿಯುತವಾಗಿ ವಿಧಿವತ್ತಾಗಿ ಕಾರ್ಯಕ್ರಮ ನಡೆಸಿಕೊಟ್ಟರು.
ಗಂಡು ಕಪ್ಪೆ ಪರವಾಗಿ ಮಹಿಳೆಯೋರ್ವಳು ವಧು ವರ್ಷಾ ಕಪ್ಪೆಗೆ ತಾಳಿಯನ್ನು ಕಟ್ಟಿದಳು. ಮದುವೆಯನ್ನು ಕಲ್ಯಾಣಮಂಟಪವೊಂದರಲ್ಲಿ ಆಯೋಜಿಸಲಾಗಿತ್ತು.
ಯಾವುದೇ ಮದುವೆ ತಯ್ಯಾರಿಗೆ ಕಡಿಮೆ ಇಲ್ಲದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಸಂಗೀತ ವಾದ್ಯ ಸೇರಿಂದತೆ ಅಕ್ಷತೆ ಇತರೆ ಸಮರ್ಪಕ ವ್ಯವಸ್ಥೆ ಮಾಡಲಾಗಿತ್ತು ಒಟ್ಟಾರೆ ಅದ್ದೂರಿ ಮದುವೆ ಜರುಗಿತು. ಊಟದ ವ್ಯವಸ್ಥೆಯು ಮಾಡಲಾಗಿತ್ತು.