ಪ್ರಮುಖ ಸುದ್ದಿ
ಸಿದ್ದುನ ಉಡಾಫೆ ಮಾತೆ ಚಾಮುಂಡೇಶ್ವರಿಯಲ್ಲಿ ಸೋಲಿಸಿದೆ
ಸಿದ್ರಾಮಯ್ಯನ ಉಡಾಫೆ ಮಾತಿಗೆ ಶ್ರೀನಿವಾಸ ಪ್ರಸಾದ ಗರಂ
ಬೆಂಗಳೂರಃ ಮಾಜಿ ಸಿಎಂ ಸಿದ್ರಾಮಯ್ಯನವರಿಗೆ 120 ಕೋಟಿ ಜನ ಪ್ರತಿನಿಧಿಯಾಗಿರುವ ಪ್ರಧಾನಿ ಮೋದಿಯವರ ಬಗ್ಗೆ ಯಾವ ರೀತಿ ಮಾತನಾಡಬೇಕೆಂಬ ಅರಿವಿಲ್ಲ ಉಡಾಫೆ ಮಾತನಾಡುವ ಮೂಲಕವೇ ಅವರು ಚಾಮುಂಡೇಶ್ವರಿ ಯಲ್ಲಿ ಸೋಲನುಭವಿಸಿದ್ದಾರೆ ಎಂದು ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ ತಿಳಿಸಿದರು.
ಕಂದಗೋಳ ಉಪ ಚುನಾವಣೆ ಹಿನ್ನೆಲೆ ಆಗಮಿಸಿದ್ದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿದ್ರಾಮಯ್ಯ ಯಾವಾಗಲು ನಾನು ನಾನು ಅಂತಲೇ ಜನರಿಂದ ತಿರಸ್ಕಾರಗೊಂಡಿದ್ದು, ಓರ್ವ ಪ್ರಧಾನಿಯವರ ವಿರುದ್ಧ ಹೇಳಿಕೆ ಕೊಡುವಾಗ ಯೋಚನೆ ಇರಬೇಕು ಮೈಮೇಲೆ ಅಹಂ ಇರಬಾರದು.
ಯಾವಾಗಲು ಉಡಾಫೆ ಮಾತನಾಡುವ ಮನುಷ್ಯ ಸಿದ್ರಾಮಯ್ಯ ಎಂದು ಅವರು ಜರಿದರು.