ವಿನಯ ವಿಶೇಷ

ಮೀನ ರಾಶಿಯವರು ವಾಹನ ಸವಾರಿ ವೇಳೆ ಎಚ್ಚರಿಕೆ.? ನಂಬಿಕಸ್ಥರಿಂದ ಮೋಸ

ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಮಾಘ
ಋತು : ವರ್ಷ
ರಾಹುಕಾಲ 10:56 – 12:28
ಗುಳಿಕ ಕಾಲ 07:50 – 09:23
ಸೂರ್ಯೋದಯ 06:16:59
ಸೂರ್ಯಾಸ್ತ 18:39:43
ತಿಥಿ : ಅಮಾವಾಸ್ಯೆ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಚಂಚಲ ಮನಸ್ಸನ್ನು ತೆಗೆದುಹಾಕಿ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿರುವ ಅಸ್ಥಿರತೆಯನ್ನು ಸರಿಪಡಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ. ಈ ದಿನ ನಿಮ್ಮ ಕೆಲವು ನಿರ್ಧಾರಗಳು ಬದಲಾವಣೆಗೆ ಮಾಡಿಕೊಳ್ಳುವ ವ್ಯವಸ್ಥೆ ಮಾಡುವಿರಿ. ಸದಾ ನಿಮ್ಮ ಹಿಂದೆ ಬೆಂಬಲಿಗರು ದೂರ ಹೋಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಕಾರ್ಯಯೋಜನೆಗಳಲ್ಲಿ ಕುಟುಂಬ ಮತ್ತು ಸಹೋದ್ಯೋಗಿಗಳನ್ನು ವಿಶ್ವಾಸದಿಂದ ತೆಗೆದುಕೊಂಡು ಮುನ್ನಡೆ ಸಾಧಿಸುವುದು ಅಗತ್ಯವಿದೆ. ಪತ್ನಿಯ ಸಂಗಡ ಕಿರಿಕಿರಿ ಮಾಡಿಕೊಳ್ಳುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ವೃಷಭ ರಾಶಿ
ಹೊಸತನವನ್ನು ವೃದ್ಧಿಸಿಕೊಂಡು ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಈ ದಿನ ಶಕ್ತಿ ದೈವದ ಮೊರೆ ಹೋಗುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕ ವ್ಯವಹಾರಗಳು ನಿಮ್ಮ ಚಾಣಕ್ಷತನದಿಂದ ಸುಧಾರಣೆಗಳಾಗಲಿದೆ. ತೆಗೆದುಕೊಂಡಿರುವ ಸಾಲಗಳನ್ನು ಮರುಪಾವತಿ ಮಾಡಲು ಬಯಸುವಿರಿ. ಆಕಸ್ಮಿಕವಾಗಿ ಬಾಲ್ಯದ ಸ್ನೇಹಿತರು ಭೇಟಿಯಾಗುವ ಸಾಧ್ಯತೆ ಇದೆ. ಸಂಜೆಯ ವಾತಾವರಣ ಮೋಜು-ಮಸ್ತಿ ಗಳಿಂದ ಕೂಡಿರಬಹುದು. ತಡರಾತ್ರಿ ಮನೆಗೆ ಹೋಗುವುದು ಸರಿಯಲ್ಲ. ಸಂಗಾತಿಯ ಮನಸ್ಥಿತಿ ಸರಿ ಇಲ್ಲದಿರುವುದು ಕಂಡುಬರುತ್ತದೆ, ಆದಷ್ಟು ಸಮಾಧಾನಪಡಿಸಲು ಮುಂದಾಗಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ನಿಮ್ಮ ಯೋಜನೆಗಳಲ್ಲಿ ಕೆಲವರು ಅವಿರತವಾಗಿ ತಡೆಹಿಡಿಯುವ ಸಾಧ್ಯತೆಗಳು ಕಾಣಬಹುದಾಗಿದೆ. ನಿಮ್ಮ ದೌರ್ಬಲ್ಯಗಳನ್ನು ಅಸ್ತ್ರವಾಗಿ ಪ್ರಯೋಗಿಸಬಹುದು ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ. ಹೂಡಿಕೆ ಮತ್ತು ಯೋಜನೆಗಳನ್ನು ಸಂಪೂರ್ಣ ಜ್ಞಾನ ಪಡೆದು ಮಾಡುವುದು ಒಳಿತು. ವಿನಾಕಾರಣ ಕಾದಾಟ ಮಾಡುವ ಮನಸ್ಥಿತಿಯಿಂದ ನಿಮ್ಮ ಮೇಲೆ ಎರಗುವ ಜನಗಳಿಂದ ದೂರವಿರಿ. ಕುಲದೇವತಾರಾಧನೆ ಮಾಡುವುದು ಒಳಿತು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಆರ್ಥಿಕವಾಗಿ ಲಾಭ ಗಳಿಸುವ ಉದ್ದೇಶದಿಂದ ನಾನಾ ರೀತಿಯ ಯೋಜನೆಗಳನ್ನು ರೂಪಿಸುವಿರಿ. ನಿಮ್ಮಲ್ಲಿ ಯೋಜನೆ ಉತ್ತಮವಾಗಿದ್ದರೂ ಅದನ್ನು ನೆರವೇರಿಸುವರು ಶಿಸ್ತು ಕಡಿಮೆಯಾಗಬಹುದು ಆದಷ್ಟು ಯಾವುದೇ ಕೆಲಸ ಮಾಡುವ ಮುನ್ನ ಶ್ರದ್ಧೆಯನ್ನು ಬೆಳೆಸಿಕೊಳ್ಳಿ. ಉದ್ಯೋಗದಲ್ಲಿನ ನಿಯಮಗಳನ್ನು ಮೀರುವ ಅಭ್ಯಾಸವನ್ನು ತೆಗೆದುಹಾಕಿ. ಕೊಟ್ಟಿರುವ ಕಾರ್ಯಗಳನ್ನು ಮೊದಲೇ ಮಾಡಲು ಸೂಕ್ತ ರೀತಿಯಾಗಿ ತಯಾರಿ ನಡೆಸುವುದು ಒಳಿತು. ಸಂಗಾತಿಯು ಪ್ರೀತಿಯ ಭಾವನೆಯಿಂದ ಬರುವರು ನೀವು ಕೆಲಸದ ಒತ್ತಡದಿಂದ ಕಡೆಗಣಿಸುವುದು ಅವರ ಮನಸ್ಸಿಗೆ ಬೇಸರವಾಗಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಕೆಲಸದಲ್ಲಿ ನಿಮ್ಮ ಬಗೆಗೆ ಮೆಚ್ಚುಗೆ ಭಾವನೆ ಬರಲಿದೆ. ದೊಡ್ಡ ಯೋಜನೆಗಾಗಿ ಆಸ್ಪದ ನೀಡಲಿದ್ದಾರೆ. ಸಮಾರಂಭಗಳ ಪೂರ್ಣ ತಯಾರಿ ನಿಮ್ಮ ವಿಚಾರಗಳಂತೆ ನಡೆಯಲು ಚಾಲನೆ ನೀಡುವರು. ಆತುರದ ವರ್ತನೆಗಳು ಸರಿಯಲ್ಲ. ಯೋಜನೆಗಳಲ್ಲಿ ನೀವು ಚೈತನ್ಯದಿಂದ ವರ್ತಿಸುವುದು ಅವಶ್ಯಕವಿದೆ. ಮನೆಯಲ್ಲಿ ಲಗುಬಗೆಯಿಂದ ವಸ್ತುಗಳು ಮರೆತುಹೋಗುವ ಅಥವಾ ಕಳೆದು ಹೋಗುವ ಸಾಧ್ಯತೆ ಇದೆ ಆದಷ್ಟು ಸಮಾಧಾನದಿಂದ ವರ್ತಿಸಿ. ಹಣಗಳಿಕೆಯಲ್ಲಿ ಉತ್ತಮ ಸ್ವರೂಪ ಪಡೆಯಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ನಿಮ್ಮ ಆಂತರಿಕ ಮನಸ್ಸಿನ ದುಃಖಗಳನ್ನು ಆತ್ಮೀಯರ ಬಳಿ ಹಂಚಿಕೊಂಡು ಪರಿಹಾರ ಪಡೆದುಕೊಳ್ಳುವುದು ಒಳ್ಳೆಯದು. ಈ ದಿನ ನಿಮ್ಮ ಯೋಜನೆಗೆ ಸಂಬಂಧಪಟ್ಟ ಹಾಗೆ ಬೆಂಬಲ ಪಡೆಯಲು ಹಲವು ವ್ಯಕ್ತಿಗಳೊಡನೆ ಮಾತುಕತೆ ನಡೆಸುವಿರಿ. ಭೋಗ ವಿಲಾಸಿತನ ನಿಮಗೆ ಹೆಚ್ಚಿನ ಸಮಸ್ಯೆ ತರಬಹುದು ಆದಷ್ಟು ಇದಕ್ಕೆ ಕಡಿವಾಣ ಹಾಕುವುದು ಉತ್ತಮ. ವಸ್ತುಗಳ ಖರೀದಿಯಲ್ಲಿ ಬೇಕಾದ್ದನ್ನು ಮಾತ್ರ ತೆಗೆದುಕೊಳ್ಳಿ ವಿನಾಕಾರಣ ದುಂದುವೆಚ್ಚ ಮಾಡುವುದು ಬೇಡ. ಸಂಗಾತಿಯ ಜೊತೆಗೆ ಈ ದಿನ ಸಭೆ-ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ಹಿರಿಯರು ನಿಮಗೆ ಅವಶ್ಯವಿರುವ ಸೌಲಭ್ಯಗಳನ್ನು ದಯಪಾಲಿಸುತ್ತಾರೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ತುಲಾ ರಾಶಿ
ಸಜ್ಜನ ಸ್ವಭಾವದಿಂದ ಪ್ರಿಯವಾದವರಿಗೆ ಹತ್ತಿರ ಆಗುವಿರಿ. ಪ್ರೇಮ ಭಾವನೆಯಲ್ಲಿ ಸಫಲತೆಯ ಮುದ್ರೆ ಒತ್ತಲಿದ್ದೀರಿ. ಅನಿರೀಕ್ಷಿತವಾದ ಸಂಗತಿಗಳಿಂದ ಮನಃಶಾಂತಿ ಹಾಳಾಗಬಹುದು. ಈ ದಿನ ಪ್ರೇಮದಲ್ಲಿ ನಿಮ್ಮ ಮನಸ್ಸು ಜಾರಲಿದೆ. ಸಂಗಾತಿಯೊಡನೆ ಬಹಳಷ್ಟು ಚರ್ಚಿಸುವಿರಿ, ಅವರ ಇಷ್ಟದ ಬಯಕೆಗಳಿಗೆ ಸಕಾರಾತ್ಮಕ ಸ್ಪಂದನೆ ನೀಡುವಿರಿ, ಪ್ರಣಯದ ಆಸಕ್ತಿ ನಿಮ್ಮಲ್ಲಿ ಕಂಡುಬರುತ್ತದೆ. ಅನಧಿಕೃತ ಯೋಜನೆಗಳು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಆರ್ಥಿಕ ವ್ಯವಹಾರಗಳನ್ನು ಕೂಲಂಕುಶವಾಗಿ ಅಳೆದು ತೂಗಿ ಮಾಡುವುದು ಸೂಕ್ತ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಕೆಟ್ಟ ಸ್ವಪ್ನ ಗಳಿಂದ ಮತ್ತು ಶಕುನ ಗಳಿಂದ ಮನಸ್ಸಿನಲ್ಲಿ ಅಶಾಂತಿ ಆಗಬಹುದು ಆದಷ್ಟು ಇಂದು ಶಕ್ತಿ ದೇವತೆಗಳಿಗೆ ಭೇಟಿ ನೀಡುವುದು ಒಳ್ಳೆಯದು. ಹಿರಿಯರು ಕೊಟ್ಟಿರುವ ವ್ಯವಹಾರ ಅಥವಾ ಬಳುವಳಿಗಳು ಮುಂದುವರಿಸಿ ಕಳೆದುಕೊಳ್ಳುವುದು ಬೇಡ. ವ್ಯವಹಾರದಲ್ಲಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿ. ಕಟು ಮಾತುಗಳು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸದೆ ಅವರ ಪ್ರತಿಯೊಂದು ಆಕಾಂಕ್ಷೆಗಳಿಗೆ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಕಾರ್ಯ ಮಾಡಿಕೊಡುವುದು ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಭವಿಷ್ಯದ ಕಲ್ಪನೆಗಳನ್ನು ಸಾಕಾರಗೊಳಿಸಲು ಶ್ರಮ ಅಗತ್ಯವಿದೆ. ಕೆಲಸದಲ್ಲಿನ ಬದ್ಧತೆ ಉತ್ತಮವಾಗಿರುತ್ತದೆ. ಯೋಜನೆಗಳಲ್ಲಿನ ಅಸ್ಥಿರತೆಯನ್ನು ಸರಿಪಡಿಸಲು ಮುಂದಾಗಿ. ಲೇವಾದೇವಿ ವ್ಯವಹಾರಗಳಿಂದ ನಷ್ಟ ಸಾಧ್ಯವಿದೆ. ಹೆಚ್ಚಿನ ಜವಾಬ್ದಾರಿಗಳು ಮತ್ತು ಒತ್ತಡದ ಕೆಲಸಗಳಿಂದ ದೈಹಿಕ ಆಯಾಸ ಆಗಬಹುದು. ಈ ದಿನ ಮನೆಗೆ ಅತಿಥಿಗಳು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ. ಉತ್ತಮ ಭೋಜನ ವ್ಯವಸ್ಥೆ ಸಂತೋಷ ನೀಡಲಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಮಕರ ರಾಶಿ
ನಿಮ್ಮ ಬಹು ಆಕಾಂಕ್ಷೆ ಇರುವ ಕೆಲಸವನ್ನು ಮಾಡಲು ಈ ದಿನ ಪಣತೊಡವಿರಿ. ಸಾಧನೆ ಮಾಡಲು ಹಲವಾರು ಅವಕಾಶ ಸಿಗಲಿದೆ ಆದರೆ ಸಾಧಿಸುವ ಬಯಕೆ ಸದೃಢ ವಾಗಬೇಕಿದೆ. ನಿಮ್ಮ ಕೆಲವು ವಿಷಯಗಳಿಗೆ ವಿರೋಧಿ ಜನಗಳಿಂದ ಉಪಟಳ ಹೆಚ್ಚಾಗುವ ಸಾಧ್ಯತೆ ಇದೆ, ಆದಷ್ಟು ನಿಮ್ಮ ಬುದ್ಧಿಶಕ್ತಿಗೆ ಆದ್ಯತೆ ನೀಡಿ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿದೆ ಇರಬೇಡಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಕುಂಭ ರಾಶಿ
ದೈಹಿಕ ಕಸರತ್ತು ತೋರ್ಪಡಿಕೆಗಲ್ಲ, ಶ್ರಮದ ಕೆಲಸಕ್ಕೆ ಮಾತ್ರ ವಿನಿಯೋಗಿಸಿ. ಕಷ್ಟದ ಕಾರ್ಯಗಳನ್ನು ಈ ದಿನ ಅನಾಯಾಸವಾಗಿ ಮಾಡಿ ಮುಗಿಸುತ್ತೀರಿ. ಕೋಪಿಷ್ಟ ಸ್ವಭಾವವನ್ನು ಪ್ರದರ್ಶನ ಮಾಡುವುದು ಬೇಡ. ಬೇಡದ ವಿಚಾರಗಳಿಗೆ ಮಾನಸಿಕ ಚಿಂತೆ ತೆಗೆದುಕೊಳ್ಳುವುದು ಸಮಂಜಸ ಕಾಣುವದಿಲ್ಲ. ಸಂಗಾತಿಯಿಂದ ನಿಮ್ಮ ಯೋಜನೆಗಳಿಗೆ ಅಗತ್ಯ ನೆರವು ದೊರೆಯುತ್ತದೆ. ಮಕ್ಕಳು ನಿಮ್ಮ ಕೆಲಸದಲ್ಲಿ ಭಾಗಿಯಾಗಿ ಸಹಕಾರ ನೀಡಲಿದ್ದಾರೆ. ಶೈಕ್ಷಣಿಕ ಸಾಧನೆ ಉತ್ತಮವಾಗಿ ರೂಪುಗೊಳ್ಳಲಿದೆ. ಈ ದಿನ ಕೆಲವರು ನಿಮ್ಮನ್ನು ಸಾಧನೆಗೆ ಪ್ರೇರೇಪಿಸುವ ಮಾರ್ಗಗಳನ್ನು ತೋರಿಸಲಿದ್ದಾರೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ಮನಸ್ಸಿನಲ್ಲಿ ಮೂಡುವ ಆಲೋಚನೆಗಳನ್ನು ನಿಯಂತ್ರಣದಲ್ಲಿಡಿ. ನಂಬಿಕಸ್ಥ ಜನಗಳಿಂದ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರವಿರಲಿ. ವಾಹನ ಸವಾರಿಯಲ್ಲಿ ಜಾಗ್ರತೆ ಅತ್ಯವಶ್ಯಕ. ಚಂಚಲ ಮನಸ್ಸಿನಿಂದ ಕೆಲಸಗಳಲ್ಲಿ ಪರಿಪಕ್ವತೆ ಕಾಣಸಿಗದು, ಆದಷ್ಟು ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಸಾಲದ ಬಾಧೆಯಿಂದ ಅವಮಾನಕರ ಪ್ರಸಂಗ ಎದುರಿಸಬೇಕಾದ ಸಾಧ್ಯತೆ ಇದೆ ಆದಷ್ಟು ಹಣಕಾಸಿನ ವಿಷಯದಲ್ಲಿ ಉಳಿತಾಯದ ಯೋಜನೆ ಮಾಡಿಕೊಳ್ಳಿ. ಅನವಶ್ಯಕ ಕೆಲಸಗಳಲ್ಲಿ ಕಾಲಹರಣ ಮಾಡುವುದು ಬೇಡ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button