ಪ್ರಮುಖ ಸುದ್ದಿ
ಕಿಕಿ ಡ್ಯಾನ್ಸ್ ಬಗ್ಗೆ ನಟ ಶಿವರಾಜಕುಮಾರ್ ಹೇಳಿದ್ದೇನು ಗೊತ್ತಾ?
ಬೆಂಗಳೂರು: ಕಿಕಿ ಡ್ಯಾನ್ಸ್ ತಪ್ಪಲ್ಲ, ಆದರೆ ಹುಷಾರಾಗಿರಬೇಕು. ಕಿಕಿ ಡ್ಯಾನ್ಸ್ ಗೆ ಕೆಲವು ಟ್ರಿಕ್ಸ್ ಇವೆ ಎಂದು ತೀವ್ರ ವಿವಾದಕ್ಕೀಡಾಗಿರುವ ಕಿಕಿ ಡ್ಯಾನ್ಸ್ ಬಗ್ಗೆ ನಟ ಶಿವರಾಜಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಕಿಕಿ ಡ್ಯಾನ್ಸ್ ಗೆ ಮೊದಲು ಉತ್ತಮ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಟ್ರಾಫಿಕ್ ಇಲ್ಲದ ಕಡೆ ಪಾರ್ಕ್ ನಂಥ ಸ್ಥಳದಲ್ಲಿ ಕಿಕಿ ಡ್ಯಾನ್ಸ್ ಮಾಡಬಹುದು ಎಂದಿದ್ದಾರೆ.
ಕಿಕಿ ಡ್ಯಾನ್ಸ್ ಮಾಡುವ ಮುನ್ನ ಜಾಗೃತಿ ವಹಿಸಬೇಕು. ಚಲಿಸುವ ಕಾರಿನ ಜೊತೆ ಹೆಜ್ಜೆ ಹಾಕುವ ಕಿಕಿ ಡ್ಯಾನ್ಸ್ ಗೆ ಬೇಕಾದ ಟೆಕ್ನಿಕ್ ಗಳನ್ನು ತಿಳಿದುಕೊಳ್ಳಬೇಕು. ಆ ಮೂಲಕ ಅಪಾಯ ಸಂಭವಿಸದಂತೆ ಮುಂಜಾಗೃತೆ ವಹಿಸಬೇಕು ಎಂದು ನಟ ಶಿವರಾಜಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.