ಹರಕೆ ತೀರಿಸಿದ ದರ್ಶನಾಪುರ ಅಭಿಮಾನಿಗಳು..!
101 ಟೆಂಗಿನ ಕಾಯಿ ಅರ್ಪಿಸಿದ ಅಭಿಮಾನಿಗಳು..
ಯಾದಗಿರಿಃ ಜಿಲ್ಲೆಯ ಶಹಾಪುರ ವಿಧಾನಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರಣಬಸಪ್ಪಗೌಡ ದರ್ಶನಾಪೂರ ಕ್ಷೇತ್ರದಲ್ಲಿ ಗೆಲವು ದಾಖಲಿಸಿದ ಪ್ರಯುಕ್ತ ಇಲ್ಲಿನ ಅವರ ಅಭಿಮಾನಿಗಳು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಆರಾಧ್ಯ ದೈವ ಸ್ವರೂಪಿ ಯಮನೂರಿನ ರಾಜಾಭಕ್ಷಸಾಬ ದೇವರಿಗೆ ತೆರಳಿ 101 ತೆಂಗಿನ ಕಾಯಿ ಹೊಡೆಯುವ ಮೂಲಕ ದರ್ಶನಾಪೂರ ಅಭಿಮಾನಿಗಳು ಹರಿಕೆ ತೀರಿಸಿದರು.
ಕಳೆದ ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 30,000 ಕ್ಕೂ ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಕ್ಷೇತ್ರದಲ್ಲಿ ದರ್ಶನಾಪುರ ಭರ್ಜರಿ ಗೆಲುವು ಸಾಧಿಸಿದ್ದರು.
ಅಭಿಮಾನಿ ಮೌನೇಶ್ ಹಳಿಸಗರ ಮಾತನಾಡಿ, ನವಲಗುಂದದ ರಾಜಾಭಕ್ಷ್ಯ ಯಮನೂರಪ್ಪ ದೇವರಿಗೆ ದರ್ಶನಾಪುರ ಗೆಲುವು ಸಾಧಿಸಿದ್ದಲ್ಲಿ 101 ಟೆಂಗಿನ ಕಾಯಿ ಹೊಡೆಯುವುದಾಗಿ ಚುನಾವಣೆ ಸಂದರ್ಭದಲ್ಲಿ ಹರಕೆ ಹೊತ್ತಿದ್ದೇವು. ಅದರಂತೆ ದರ್ಶನಾಪುರ ಅವರು ಗೆಲುವು ಸಾಧಿಸಿದ್ದಾರೆ.
ಹೀಗಾಗಿ ಹರಕೇ ತೀರಿಸುವ ಮೂಲಕ ನಂಬಿದ್ದ ದೇವರನ್ನು ವಿಶೇಷವಾಗಿ ಪೂಜಿಸಿ, ಮುಂಬರುವ ದಿನಗಳಲ್ಲಿ ದರ್ಶನಾಪುರ ಅವರಿಗೆ ರಾಜ್ಯ ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿ ಮತ್ತು ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿ ನೀಡಲಿ ಕ್ಷೇತ್ರವನ್ನು ಅಭಿವೃದ್ಧಿಪಥದತ್ತ ಮುನ್ನಡೆಸಲಿ, ಭಗವಂತ ಶಾಸಕರಿಗೆ ಆಯುರಾರೋಗ್ಯ ಹೆಚ್ಚಿನ ಅಧಿಕಾರಿ ನೀಡಿ, ಕ್ಷೇತ್ರದ ಮಾತ್ರವಲ್ಲದೆ ಇಡಿ ಜಿಲ್ಲೆಯ ಅಭಿವೃದ್ಧಿಗೆ ಮತ್ತು ಜನರ ಆಶೋತ್ತರಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.
ಹರಕೆ ತೀರಿಸುವ ಸಂದರ್ಭ ವಿಜಯ ಚಿಗರಿ ಅಣಬಿ, ನಿಂಗಣ್ಣ ಪೂಜಾರಿ ಸಗರ, ಹಣಮಂತ ಹಳಿಸಗರ, ಮಹಿಮೂದ ಶಿರವಾಳ, ತಿರುಪತಿ, ನಾಗು, ಮುದ್ದಪ್ಪ, ಶ್ರೀಶೈಲ್ ಸಗರ ಇತರರು ಇದ್ದರು.