ಪ್ರಮುಖ ಸುದ್ದಿ

ಇನ್ನೂ ಸಿಲಿಂಡರಗಾಗಿ‌ ಪರದಾಟ ತಪ್ಪಲಿದೆ, ಮನೆಮನೆಗೆ ಅನಿಲ ಪೂರೈಕೆ

ರಾಜ್ಯಕ್ಕೂ ಬಂತು ಮನೆ ಮನೆಗೆ ಅನೀಲ, ಇನ್ಮುಂದೆ ಸಿಲಿಂಡರಗಾಗಿ‌ ಪರದಾಟ ಇಲ್ಲ

ದೆಹಲಿಃ ಪೈಪ್ ಲೈನ್ ಮೂಲಕ ಅನಿಲ ಸರಬರಾಜು ಮಾಡುವ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರ ಮಹತ್ವಕಾಂಕ್ಷೆ ಯೋಜನೆ ರಾಜ್ಯಕ್ಕೂ ಲಭಿಸಿದೆ.

ನಗರದ‌ ವಿಜ್ಷಾನ ಭವನದಲ್ಲಿ ಗುರುವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ 129 ನಗರಗಳಲ್ಲಿ ಏಕಕಾಲಕ್ಕೆ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಕೊಳವೆ‌ಗಳ ಮೂಲಕ ಮನೆಮನೆಗೆ ಅಡುಗೆ ಅನಿಲ ಪೂರೈಕೆ ಹಾಗೂ ಬಂಕ್ ಸ್ಟೇಷನ್ಗಳ ಮೂಲಕ ವಾಹನಗಳಿಗೂ ಸಿಎನ್ಜಿ ಅನಿಲ ಪೂರೈಸುವ ವ್ಯವಸ್ಥೆ ಕಲ್ಪಿಸುವ ಯೋಜನೆ ಇದಾಗಿದ್ದು,
ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ರಾಮನಗರ, ಚಿತ್ರದುರ್ಗ, ದಾವಣಗೇರೆ, ಬೀದರ್, ಬಳ್ಳಾರಿ ಹಾಗೂ ಗದಗ ಜಿಲ್ಲೆಯಲ್ಲಿ ಮನೆಮನೆಗೆ ಕೊಳವೆ ಮೂಲಕ ಅನಿಲ ವಿತರಣೆ ವ್ಯವಸ್ಥೆ ಇನ್ನೇನು ಕೆಲವೇ ವರ್ಷದಲ್ಲಿ ಸಾಕಾರಗೊಳ್ಳಲಿದೆ.

ಈ ಯೋಜನೆ ಅನುಷ್ಢಾನ ಹಂತಹಂತವಾಗಿ‌ ಎಲ್ಲಾ ನಗರಗಳಿಗೂ ವಿಸ್ತಾರಗೊಳ್ಳಲಿದೆ‌ ಎಂದು ಪ್ರಧಾನಿಯವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕಳೆದ‌ ಎರಡು ವರ್ಷದಿಂದ ಕೇಂದ್ರ ಸರಕಾರ ಸುಮಾರು ದೇಶದ 268 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಅನಿಲ ವಿತರಣೆಗೆ ಬೆಕಾಗುವ ಪೈಪ್ ಲೈನ್ ಕೆಲಸ‌‌ ಕೈಗೆತ್ತಿಕೊಂಡಿತ್ತು. ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದ್ದು, ಕರ್ನಾಟಕದಿಂದ ಆಯ್ದುಕೊಂಡ ಜಿಲ್ಲೆಯಲ್ಲೂ ಪೈಪ್ ಲೈನ್ ಕೆಲಸ‌ ಭರ್ಜರಿ ಯಾಗಿ ನಡೆದಿದೆ ಎನ್ನಲಾಗಿದೆ.

ಇನ್ನೇನು 268 ಜಿಲ್ಲೆಗಳಿಗೆ ಮೊದಲ‌ ಹಂತದ ಕೆಲಸ‌ ಮುಗಿಸಿ ಅನಿಲ‌ ಸರಬರಾಜು ಮಾಡುವ ಧಾವಂತದಲ್ಲಿ ಕೇಂದ್ರ ಸರ್ಕಾರ‌ ಯೋಜಿಸಿದೆ.

ಹೀಗಾಗಿ ಮುಂಬರುವ ದಿನಗಳಲ್ಲಿ ಸಿಲಿಂಡರಗಾಗಿ ಜನರ ಪರದಾಟ ತಪ್ಪಲಿದೆ. ಬೇಕಾದಷ್ಟು ಅನಿಲ‌ ಮನೆಮನೆಗೆ ವಿದ್ಯುತ್ ಸರಬರಾಜಿನಂತೆ‌ ಅನಿಲವು ಸರಬರಾಜು ಆಗಲಿದೆ. ಬಳಕೆಯಷ್ಟೆ ಬಿಲ್‌ ಬರಲಿದೆ‌.

Related Articles

Leave a Reply

Your email address will not be published. Required fields are marked *

Back to top button