ಪ್ರಮುಖ ಸುದ್ದಿ
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ನೇತ್ರಾವತಿ ನದಿ ಬಳಿ ನಾಪತ್ತೆ!
ಮಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫಿಡೇ ಮಾಲೀಕ ಸಿದ್ಧಾರ್ಥ ನಾಪತ್ತೆ ಆಗಿರುವ ಘಟನೆ ಮಂಗಳೂರು- ಉಳ್ಳಾಲ ಸಮೀಪದ ಸೇತುವೆ ಬಳಿ ನಡೆದಿದೆ. ಕಾರಿನಿಂದ ಇಳಿದು ಮೊಬೈಲ್ ನಲ್ಲಿ ಮಾತನಾಡುತ್ತ ತೆರಳಿದ ಸಿದ್ದಾರ್ಥ ವಾಪಸ್ ಬಾರದಿದ್ದಾಗ ಕಾರು ಚಾಲಕ ಹುಡುಕಾಟ ಶುರು ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ರಾತ್ರಿ ಪೂರ್ಣ ನೇತ್ರಾವತಿ ನದಿ ಬಳಿ ಕಾರು ಚಾಲಕ ಮತ್ತು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೆ ಸಿದ್ದಾರ್ಥ ಪತ್ತೆ ಆಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.