ಬಸವಭಕ್ತಿ
ಕತ್ತಲ ಕಾರ್ಮೋಡ ಬೇಧಿಸಿದ ಚಿಂತನಹಳ್ಳಿ
ಯಾದಗಿರಿಃ ಕತ್ತಲು ಕವಿದ ವಾತಾವರಣ ಇಬ್ಬನಿ ಮುಸುಕಿದ ಚಳಿ ನಡುವೆ ಸಾವಿರಾರು ಭಕ್ತರ ಮಧ್ಯ ಚಿಂತನಹಳ್ಳಿಯ ಚೈತನ್ಯ ಸ್ವರೂಪಿ ಶ್ರೀ ಗವಿ ಸಿದ್ದಲಿಂಗೇಶ್ವರರ ದೀಪೋತ್ಸವದ ಬೆಳಕು ಆವರಿಸಿತ್ತು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಆರಾಧ್ಯದೇವರ ಹೊಂಬೆಳಕಿನಡಿ ತಮ್ಮ ಬದುಕಿನ ಸನ್ಮಾರ್ಗ ವನ್ನು ಕಂಡುಕೊಂಡರು.
ಹೌದು ಇದು ಯಾದಗಿರಿ ತಾಲೂಕಿನ ಸುಕ್ಷೇತ್ರ ಚಿಂತನಹಳ್ಳಿ ಗವಿ ಸಿದ್ಧಲಿಂಗೇಶ್ವರ ಕ್ಷೇತ್ರದಲ್ಲಿ ಯಲ್ಹೇರಿ ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳ 87 ನೇ ಜನ್ಮದಿನೋತ್ಸವದ ನಿಮಿತ್ತ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.
ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಯಲ್ಹೇರಿ ಶ್ರೀಗಳು ಚಾಲನೆ ನೀಡಿದರು.
ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಕ್ಷೇತ್ರದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಧನ್ಯತಾಭಾವ ವ್ಯಕ್ತಪಡಿಸಿದರು.