ಪ್ರಮುಖ ಸುದ್ದಿ
ಚಿಕ್ಕಮಗಳೂರು: ಕಾಫಿನಾಡಿಗೆ ಭೂ ವಿಜ್ಞಾನಿಗಳ ತಂಡ ಭೇಟಿ ಪರಿಶೀಲನೆ

ಚಿಕ್ಕಮಗಳೂರು: ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಹಾಗೂ ಸುಪ್ರಸಿದ್ಧ ಪ್ರವಾಸಿ ತಾಣವಾದ ಪಶ್ಚಿಮ ಘಟ್ಟಗಳ ತಪ್ಪಲಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡದ ಪರಿಶೀಲನೆ ನಡೆಸಿದೆ. ಜಿಲ್ಲಾಡಳಿತ 77 ಅಪಾಯಕಾರಿ ಸ್ಥಳವನ್ನು ಗುರುತು ಮಾಡಿ ವರದಿ ಕಳಿಸಿತ್ತು. ಆ ಹಿನ್ನೆಲೆ ಇಂದು ಚಂದ್ರದ್ರೋಣ ಪರ್ವತಗಳ ಸಾಲಿನ ಕವಿಕಲ್ ಗಂಡಿ, ಮುಳ್ಳಯ್ಯನಗಿರಿ ಮಾರ್ಗ, ದತ್ತಪೀಠ ಸೇರಿದಂತೆ ಗಿರಿ ಭಾಗದಲ್ಲಿ ಜಿಯೋಲಾಜಿಕಲ್ ಸರ್ವೇ ಆಪ್ ಇಂಡಿಯಾ ತಂಡದಿಂದ ಪರಿಶೀಲನೆ ಆರಂಭವಾಗಿದ್ದು. ಹಿರಿಯ ಭೂ ವಿಜ್ಞಾನಿ ಸೇಂಥಿಲ್ ಕುಮಾರ್ ನೇತೃತ್ವದ ತಂಡದಿಂದ ಸರ್ವೇ ಆರಂಭವಾಗಿದ್ದು, ಇನ್ನು ಎರಡು ದಿನ ಜಿಲ್ಲಾದ್ಯಂತ ಆಯಕಟ್ಟಿನ ಪ್ರದೇಶದಲ್ಲಿ ಸರ್ವೇ ನಡೆಸಲಿದ್ದಾರೆ.