ಪ್ರಮುಖ ಸುದ್ದಿ
ಸುಧಾಕರ ಬಂದ್ರೆ ಬರುವೆ ಇಲ್ಲಾಂದ್ರೆ ನಾನೊಬ್ಬನೇ ಏನ್ಮಾಡಲಿ-MTB
ಸುದ್ಧಿಗೋಷ್ಠಿ ನಂತರ ಮಾತು ಚೇಂಜ್ ಮಾಡಿದ ಎಂಟಿಬಿ.!
ಬೆಂಗಳೂರಃ ಇದೀಗ ಸುದ್ಧಿಗೋಷ್ಠಿಯಲ್ಕಿ ಘಟಾನು ಘಟಿ ನಾಯಕರ ಎದುರು ರಾಜೀನಾಮೆ ವಾಪಸ್ ಪಡೆಯುವೆ ಎಂದಿದ್ದ, ಶಾಸಕ ಎಂಟಿಬಿ ಎರಡನೇ ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೇ ನೀಡುವಾಗ ಉಲ್ಟಾ ಹೊಡೆದಿದ್ದಾರೆ.
ಶಾಸಕ ಸುಧಾಕರ ಅವರು ರಾಜೀನಾಮೆಗೆ ಒಪ್ಪಿದ್ದಲ್ಲಿ ಇಬ್ಬರು ಒಟ್ಟಿಗೆ ವಾಪಸ್ ಆಗುತ್ತೇವೆ. ಅವರು ಬರಲಿಲ್ಲ ಅಂದ್ರೆ ನೀವೇನು ಮಾಡ್ತೀರಾ ಎಂದು ಮಾಧ್ಯಮದ ಮರು ಪ್ರಶ್ನೆಗೆ ಉತ್ತರಿಸಿದ ಎಂಟಿಬಿ ಸುಧಾಕರ ಅವರು ಬಂದ್ರೆ ನಾನು ವಾಪಸ್ ಬರುವೆ ಇಲ್ಲಾಂದ್ರೆ ನಾನಿಬ್ಬನೆ ವಾಪಸ್ ಬಂದು ಏನ್ಮಾಡಲಿ ಎಂಬ ಹೇಳೀಕೆಯನ್ನು ನೀಡಿದ್ದಾರೆ.
ನಾಳೆ ರವಿವಾರ ಎಂಟಿಬಿ ಅವರು ರಾಜೀನಾಮೆ ನೀಡುವದು ಭರವಸೆ ಕಡಿಮೆ ಇದೆ ಎಂಬುದ ಅವರ ಮಾತಿನ ದಾಟಿ ಮೇಲೆ ಗೊತ್ತಾಗುತ್ತಿದೆ. ನಾಳೆವರೆಗೂ ಕಾಯೋಣ ಮತ್ತೇನು ಘಟನೆ ಕಂಡು ಬರಲಿವೆ ನೋಡಬೇಕು.