ಪ್ರಮುಖ ಸುದ್ದಿ
ಯಾದಗಿರಿಃ ಟ್ರೇನ್ ನಲ್ಲಿಯೇ ಗಂಡು ಮಗು ಜನನ
ಅಂಗನವಾಡಿ ಕಾರ್ಯಕರ್ತೆಯರಿಂದ ಹೆರಿಗೆಗೆ ಸಹಕಾರ
ಯಾದಗಿರಿ: ಚಲಿಸುತ್ತಿರುವ ರೈಲಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡು, ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಸೈದಾಪುರ ನಿವಾಸಿ ಗೀತಾ ತನ್ನ ಪತಿ ಜೊತೆ ಬೆಂಗಳೂರಿಗೆ
ಹೊರಟಿದ್ದ ವೇಳೆ ಪ್ರಯಾಣದ ಮಧ್ಯೆ ಹೆರಿಗೆ ನೋವು ಕಾಣಿಸಿತ್ತು ಎನ್ನಲಾಗಿದೆ.
ಆಗ ಅದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರಿಬ್ಬರಿಗೆ ಈ ವಿಷಯ ತಿಳಿದು ಗರ್ಭೀಣಿ ಮಹಿಳೆಗೆ ಧೈರ್ಯ ತುಂಬಿನಾವಿದ್ದೆವೆ ಹೆದರಬೇಡಿ ಸುಲಭ ಹೆರಿಗೆ ಆಗಲಿದೆ ಎಂದು ಹಾರೈಕೆ ಮಾಡುವ ಮೂಲಕ ಸುಲಭ ಹೆರಿಗೆ ಮಾಡಿದ್ದಾರೆ ನೀಡಿದ್ದಾರೆ.
ಸಧ್ಯ ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ. ಹೆರಿಗೆ ಮಾಡಿಸಿದ ಅಂಗನವಾಡಿ ಕಾರ್ಯೆಕರ್ತೆಯರು ಚಿತ್ತಾಪುರ ತಾಲೂಕು ನಾಲವಾರ ಗ್ರಾಮದವರೆನ್ನಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಿಕಾ ಮತ್ತು ಹಾಲಾಬಾಯಿ ಬಗ್ಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.