ಸಾಧನೆಗೆ ಬಡತನ, ಶ್ರೀಮಂತಿಕೆ ಪೂರಕವಲ್ಲ- ಗುರು ಮಣಿಕಂಠ
ವಿದ್ಯಾರ್ಥಿ ಸಾಧನೆಗೆ ಗೌರವಿಸಿ ಪ್ರೋತ್ಸಾಹಿಸಿದ ಅಮ್ಮ ಟ್ರಸ್ಟ್
ಯಾದಗಿರಿಃ ಯಾವುದೇ ಸಾಧನೆಗೆ ಬಡತನ ಶ್ರೀಮಂತಿಕೆ ಎಂಬುದು ಪೂರಕವಾಗಿರಲ್ಲ. ಮನುಷ್ಯನ ಶ್ರಮ, ಶ್ರದ್ಧೆಯೇ ಸಾಧನೆಯ ಮೈಲಿಗಲ್ಲು ಎಂದು ಶ್ರೀಮಣಿಕಂಠ ಅಮ್ಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗುರು ಮಣಿಕಂಠ ತಿಳಿಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಳ್ಳಿ ತಾಂಡಾದ ಯುವಕ ಶಾಂತಿಲಾಲ್ ತಂದೆ ಶಂಕರ ರಾಠೋಡ ಪಿಯು ದ್ವಿತೀಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ರ್ಯಾಂಕ್ 600/562 (93.62 %) ಬಂದಿರುವ ಹಿನ್ನೆಲೆ ಗ್ರಾಮದ ವಿದ್ಯಾರ್ಥಿ ನಿವಾಸಕ್ಕೆ ತೆರಳಿ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಬಡತನದಲ್ಲೂ ನಿರಂತರ ಅಭ್ಯಾಸ ಮಾಡುವ ಮೂಲಕ ಕಷ್ಟದಲ್ಲೂ ತನ್ನ ಗುರಿಯನ್ನು ತಲುಪುವಲ್ಲಿ ವಿದ್ಯಾರ್ಥಿ ಯಶಸ್ವಿಯಾಗಿದ್ದಾನೆ. ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸ ಉನ್ನತಮಟ್ಟದಿಂದ ಕೂಡಿರಲಿ ಆತನ ಗುರಿ ತಲುಪಿ ಶಹಾಪುರ ಕೀರ್ತಿ ಪತಾಕೆ ಹಾರಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಚಿನ್ನು ಪಾಟೀಲ್, ಅರವಿಂದ ಉಪ್ಪಿನ್, ಸಾಯಬಣ್ಣ ಪುರ್ಲೆ, ಅವಿನಾಶ ಗುತ್ತೇದಾರ, ಸಿದ್ದು ಆನೇಗುಂದಿ, ಬಸ್ಸು ಯಶ್ ಇತರರಿದ್ದರು.