ವೀರಶೈವ ಲಿಂಗಾಯತ ಸಮಾವೇಶದ ಎಂಟು ನಿರ್ಣಯಗಳು?
ಗದಗ: ನಗರದ ವಿಡಿಎಸ್ ಟಿ ಮೈದಾನದಲ್ಲಿಂದು ವಿವಿಧ ಜಗದ್ಗುರುಗಳು, ಮಠಾಧೀಶರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಧರ್ಮದ ಜನಜಾಗೃತಿ ಸಮಾವೇಶ ನಡೆಯಿತು. ವೇದಘೋಷಗಳೊಂದಿಗೆ ದೀಪ ಬೆಳಗಿಸುವ ಮೂಲಕ ಸಮಾವೇಶಕ್ಕೆ ಚಾಲನೆ ಸಿಕ್ಕಿತು.
ರಂಭಾಪುರಿ ಶ್ರೀ, ಕೇದಾರ ಶ್ರೀ, ಶ್ರೀಶೈಲ ಶ್ರೀ, ಕಾಶಿ ಶ್ರೀ, ಉಜ್ಜಯನಿ ಶ್ರೀಗಳು ಸೇರಿದಂತೆ ನೂರಾರು ಸ್ವಾಮೀಜಿಗಳು ಸಮಾವೇಶದ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಎಂಟು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಎಂಟು ನಿರ್ಣಯಗಳು
1) ವೀರಶೈವ ಲಿಂಗಾಯತ ಧರ್ಮ ಹಿಂದೆ, ಇಂದು ಮತ್ತು ಮುಂದೆ ಒಂದೆ ಆಗಿದೆ.
2) ಅಖಿಲ ಭಾರತ ವೀರಶೈವ ಮಹಾಸಭಾ, ಸಿದ್ಧಗಂಗಾ ಶ್ರೀಗಳ ನಿಲುವಿಗೆ ಬೆಂಬಲ.
3) ರಾಜ್ಯ ಸರ್ಕಾರ ರಚಿಸಿದ ಲಿಂಗಾಯತ ಧರ್ಮ ಪರಿಶೀಲನೆ ಸಮಿತಿಗೆ ಆಕ್ಷೇಪ.
4) ಅಲ್ಪಸಂಖ್ಯಾತ ಮಾನ್ಯತೆ ನೆಪದಲ್ಲಿ ಸೌಲಭ್ಯದಿಂದ ವಂಚನೆ, ಧರ್ಮ ಒಡೆಯುವ ಕಾಂಗ್ರೆಸ್ ಸರ್ಕಾರದ ಹುನ್ನಾರದ ಬಗ್ಗೆ ಜಾಗೃತಿ.
5) ಒಳಪಂಗಡಗಳ ಅಭಿವೃದ್ಧಿ ಪಡಿಸುವುದು.
6) 2A ಅಥವಾ ಬೇರೊಂದು ಪ್ರವರ್ಗ ರಚಿಸಿ ಶೇ 15 ಮೀಸಲಾತಿಗೆ ಆಗ್ರಹ.
7) ಉತ್ತರಕರ್ನಾಟಕದ ಮಹದಾಯಿ ವಿವಾದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೀಘ್ರ ಆಗ್ರಹ.
8) ಪ್ರತ್ಯೇಕ ಧರ್ಮದ ಕೂಗಿನ ವಿವಾದಕ್ಕೆ ಸಂಭಂದಿಸಿದಂತೆ ನಾಲ್ಕು ಮಂತ್ರಿಗಳಿಗೆ ವಕೀಲರು ನೀಡಿದ ನೋಟಿಸ್ ವಿಚಾರಕ್ಕೆ ಬೆಂಬಲ.