ಬಲಿಷ್ಠ ಸಂಘಟನೆಯಿಂದ ಸಮಾಜದ ಅಭಿವೃದ್ಧಿ : ವಡಗೇರಿ
ಯಾದಗಿರಿ : ಬಲಿಷ್ಠ ಸಂಘಟನೆಯಿಂದ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದ್ದು, ಸಮಾಜ ಬಾಂಧವರು ಸರ್ವರೂ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಚಿಂತಿಸಲು ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಪ್ರಧಾನಕಾರ್ಯದರ್ಶಿ ದೇವಿಂದ್ರಪ್ಪ ಎಲ್ ವಡಗೇರಾ ಹೇಳಿದರು.
ನಗರದ ಬಡಿಗೇರ್ ಓಣಿಯ ಮರಿಗೆಮ್ಮ ದೇವಸ್ಥಾನದ ಆವರಣದಲ್ಲಿ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿಯವರ ಆದೇಶದ ಮೇರೆಗೆ ಸಮಾಜ ಬಲಿಷ್ಠಗೊಳಿಸಲು ನಡೆದ ಸಮಾಜ ಸಂಘಟನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ನಮ್ಮ ಸಮಾಜವು ಅಭಿವೃದ್ಧಿಹೊಂದಬೇಕಾದರೆ ಸಂಘಟನೆಯಿಂದ ಮಾತ್ರ ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಾದಗಿರಿ ನಗರ ಘಟಕ ಅಧ್ಯಕ್ಷರಾದ ಶಿವಣ್ಣ ಹೂನೂರು ರವರನ್ನು ಮುಂದೆ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮಾಡುವ ಪ್ರಸ್ತಾವನೆಯನ್ನು ಮನವಿ ಮೂಲಕ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲು ಚರ್ಚಿಸಲಾಯಿತು. ನಂತರ ಸಂಗಪ್ಪ ವಿಶ್ವಕರ್ಮ ರವರನ್ನು ಯಾದಗಿರಿ ನಗರ ಯುವ ಘಟಕ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದೇ ವೇಳೆ ಶಿವಣ್ಣ ಹೂನೂರು ಮತ್ತು ಸಂಗಪ್ಪ ವಿಶ್ವಕರ್ಮ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಅಧ್ಯಕ್ಷ ಕಾಳಪ್ಪ ದುಪ್ಪಲ್ಲಿ, ಹೋಬಳಿ ಅಧ್ಯಕ್ಷ ತಿಪ್ಪಣ್ಣ ಹಳಿಗೇರ್, ರಾಜಶೇಖರ ಕಾರ್ಪೆಂಟರ್, ಯುವ ಘಟಕ ಅಧ್ಯಕ್ಷ ಐಕೂರ ಅಶೋಕ, ಶೇಖರ ತಾತಾ ಮುಷ್ಟೂರ, ಕ್ಯಾದಿಗೆಪ್ಪ ಕಂಬಾರ, ಶರಣಪ್ಪ ಹೊಸಪೇಟೆ, ಬಸ್ಸಣ್ಣ ರಘೋಜಿ, ಬನ್ನಪ್ಪ ಸುತಾರ, ಶಿವಾನಂದ ಪುರವಂತರು, ಲೋಹಿತ್ ಕಂಬಾರ, ಚಂದ್ರಕಾಂತ ಹೆಡಗಿಮದ್ರಾ, ಅಶೋಕ ಸುತಾರ, ಗುರಪ್ಪ ಕಂಬಾರ ಸೇರಿದಂತೆ ಇತರರಿದ್ದರು.