ಪ್ರಮುಖ ಸುದ್ದಿ
ಪತ್ರಕರ್ತರಿಗೂ ಸಹಾಯ ಧನ ನೀಡಿ – ಹಾದಿಮನಿ
ಪತ್ರಕರ್ತರಿಗೂ ಸಹಾಯ ಧನ ನೀಡಲು ಮನವಿ
ಶಹಾಪುರಃ ಕೋವಿಡ್ -19 ವಿಶೇಷ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರಾಜ್ಯದ ಗ್ರಾಮೀಣ ಭಾಗದ ಪತ್ರಕರ್ತರಿಗೂ ಸಹಾಯ ಧನ ನೀಡಬೇಕೆಂದು ಆಗ್ರಹಿಸಿ ತಾಲೂಕಾ ಕರ್ನಾಟಕ ಜರ್ನಾಲಿಸ್ಟ್ ಯೂನಿಯನ್ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಜರ್ನಾಲಿಸ್ಟ್ ಯೂನಿಯನ್ ಅಧ್ಯಕ್ಷ ಈರಣ್ಣ ಹಾದಿಮನಿ, ಗ್ರಾಮೀಣ ಭಾಗದ ಪತ್ರಕರ್ತರಿಗೂ ಸೇರಿದಂತೆ ಪತ್ರಿಕಾ ಏಜೆಂಟರು, ವಿತರಕರಿಗೂ ವಿಮೆ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ ಎಲ್ಲಾ ಪತ್ರಕರ್ತರಿಗೂ ಸಹಾಯಧನ ವಿತರಿಸಬೇಕು ಮತ್ತು ಆರೋಗ್ಯ ಸುರಕ್ಷ ಕಿಟ್ ವಿತರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯೂನಿಯನ್ ಉಪಾಧ್ಯಕ್ಷ ಚಂದ್ರು ಕಟ್ಟಿಮನಿ, ಕಾರ್ಯದರ್ಶಿ ವಿಶಾಲ್ ದೋರನಹಳ್ಳಿ, ಬಸವರಾಜ ಕರೆಗಾರ, ಮಂಜುನಾಥ ಬಿರೆದಾರ, ವೆಂಕಟೇಶ ಆಲೂರ, ಭೀಮಾಶಂಕರ ಬೆನಕನಹಳ್ಳಿ, ಭಾಗಪ್ಪ ರಸ್ತಾಪುರ, ಮಹಾಂತೇಶ ಪೂಜಾರಿ, ಆಕಾಶ ಬಾರಿಗಿಡ ಸೇರಿದಂತೆ ಇತರರಿದ್ದರು.