ಪ್ರಮುಖ ಸುದ್ದಿ
ವೀರಶೈವ ಲಿಂಗಾಯತ ಸಮಾವೇಶ : ರಾಜ್ಯ ಸರ್ಕಾರದ ವಿರುದ್ಧ ಕಾಶಿ ಜಗದ್ಗುರು ಕಿಡಿ
ಗದಗ: ಈವತ್ತಿನ ಸರ್ಕಾರ ಧರ್ಮ ಒಡೆಯುವ ಮೂಲಕ ನಮ್ಮ ರುಂಡ ಮುಂಡವನ್ನ ಬೇರ್ಪಡಿಸುವ ಸಂಚು ರೂಪಿಸಿದೆ. ಧರ್ಮ ಒಡೆಯುವ ಕೆಲಸವನ್ನು ಸರ್ಕಾರ ಇಲ್ಲಿಗೆ ಬಿಡಬೇಕು. ಇಲ್ಲವಾದಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ವೀರಶೈವ ಲಿಂಗಾಯತ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದು ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ವೀರಶೈವ ಲಿಂಗಾಯತ ಸನಾತನವಾದದ್ದಾಗಿದೆ. ವಿಶ್ವಗುರು ಬಸವಣ್ಣನವರು ತಮ್ಮ ವಚನದಲ್ಲಿ ಎಲ್ಲೂ ಲಿಂಗಾಯತ ಎಂಬ ಪದ ಬಳಸಿಲ್ಲ ಎಂದು ಪ್ರತಿಪಾದಿಸಿದರು.