ಕಾಶ್ಮೀರ ಸಮಸ್ಯೆಯೂ ಮಾನವ ಹಕ್ಕುಗಳ ಉಲ್ಲಂಘನೆಯೂ…
ಜಮ್ಮು-ಕಾಶ್ಮೀರ ನಿಲ್ಲುತ್ತಿಲ್ಲ.. ಹಗೆಯ ಹೊಗೆ
ಕೆಲವು ಅಂಕಣಕಾರರಿಗೆ ಏಕಾಏಕಿ ಮಾನವ ಹಕ್ಕುಗಳ ಪ್ರಜ್ಞೆ ಜಾಗೃತವಾಗುತ್ತದೆ. ಥಾನುಗಟ್ಟಲೆ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಬರೆಯಲು ಪ್ರಾರಂಭಿಸುತ್ತಾರೆ. ಜಾಗತಿಕವಾಗಿ ವಿಭಾಗಿಸಲ್ಪಟ್ಟ ವರ್ಗವೊಂದರಲ್ಲಿ ಅವರು ಗುರುತಿಸಲ್ಪಟ್ಟು ಆ ವರ್ಗದ ಜನರಿಂದ “ಭಲೆ” “ಭೇಷ್”ಗಳ ಜೊತೆಗೆ ವಿಶ್ವ ಮಾನವ ವೇದಿಕೆ ಎನ್ನುವ ಬಯಲು ನಾಟಕದಲ್ಲಿ ಮೆರೆಯಲ್ಪಡುತ್ತಾರೆ.
ರಾಜಕೀಯದ ಪಟ್ಟಭದ್ರರು ತಮ್ಮ ಮತ ಬ್ಯಾಂಕಿನ ಮಹತ್ವಾಕಾಂಕ್ಷೆಗೆ ಬಿದ್ದು ಇವರನ್ನು ಬೆಂಬಲಿಸುತ್ತಾ ಬಲಿಸತೊಡಗುತ್ತಾರೆ. ಮೂರ್ಖವರ್ಗಗಳ ಕಣ್ಣಲ್ಲಿ ಈ ಜನ ಮಾನವತಾವಾದಿಗಳು ಮತ್ತು ಇತ್ತೀಚೆಗಷ್ಟೆ ಅನ್ಯಗ್ರಹದಿಂದ ಭೂಮಿಯನ್ನು ಉದ್ದರಿಸಲು ಬಂದ ಮಾಹಾ ಪುರುಷರು ಎಂಬಂತೆ ಕಾಣಿಸುತ್ತಾರೆ. ಲೆನಿನ್ ಮಾರ್ಕ್ಸ್ ತಮ್ಮ ರಕ್ತ ಸಂಬಂಧಿಗಳು ಎನ್ನುವಂತೆ ಈ ಜನ ಪೋಜು ನೀಡುತ್ತಾರೆ.
ಸಮಾಜವನ್ನು ವ್ಯವಸ್ಥಿತವಾಗಿ ವಿಭಾಗಿಸುವ ಸಂಚು ನಡೆಸುವ ಈ ಜನ ಉಳ್ಳವರು ಇಲ್ಲದವರು ಮತ್ತು ದಲಿತರು ಮತ್ತು ಮೇಲ್ವರ್ಗ ಎನ್ನುವ ಕಂದಕಗಳನ್ನು ನಿರ್ಮಿಸಿ ಮುಚ್ಚಿ ಹೋಗುತ್ತಿರುವ ಗಾಯ ಮತ್ತು ಕಂದಕಗಳನ್ನು ಪುನಃ ಜಾಗೃತಗೊಳಿಸುತ್ತಾರೆ.
ಮರೆತು ಹೋಗುತ್ತಿರುವ ಕೆಲವೊಂದು ಸಾಮಾಜಿಕ ಅಸಮಾನತೆ ಅಸಹಜ ಆಚರಣೆಗಳನ್ನು ಕೇವಲ ತಮ್ಮ ತಿಕ್ಕಲು ತೀಟೆಗಳಿಗಾಗಿ ಪದೇ ಪದೇ ಜಾಗೃತಗೊಳಿಸುತ್ತಾ ಸಮಾಜದಲ್ಲಿ ಒಂದು ದ್ವೇಷ, ಒಂದು ಹಗೆಯ ಹೊಗೆ ನಿರಂತರವಾಗಿರುವಂತೆ ನೋಡಿಕೊಳ್ಳುತ್ತಾರೆ.
ಇವರು ಮೂಢನಂಬಿಕೆಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಾರೆ.ಕತ್ತಲಿನಲ್ಲಿ ಮೂತ್ರವಿಸರ್ಜನೆ ಮಾಡಲು ದೆವ್ವಗಳಿರುತ್ತವೆ ಎಂದು ಹೆದರುತ್ತಾರೆ.ಇವರ ಕುಟುಂಬದ ಇತರೆ ಸದಸ್ಯರು ಇವರು ಕಂದಾಚಾರವೆಂದು ಸಾರ್ವಜನಿಕವಾಗಿ ಭಾಷಣ ಹೊಡೆಯುವ ಎಲ್ಲಾ ಆಚರಣೆಗಳಿಗೆ ಬದ್ಧರಾಗಿರುತ್ತಾರೆ.ಇವರ ಹೆಂಡತಿಯರು ಮಾಂಗಲ್ಯ, ಕಾಲುಂಗುರ,ಕುಂಕುಮ ಮತ್ತು ದೇವಸ್ಥಾನಗಳ ಪೂಜೆಗಳನ್ನು ಯಥಾರೀತಿಯಾಗಿ ಮಾಡುತ್ತಿರುತ್ತಾರೆ.
ಅದೇನಯ್ಯ ಪ್ರಗತಿಪರ,ನಾಸ್ತಿಕವಾದ ಲಂಡು ಲಸ್ಕು ಅಂತೀಯ ನಿನ್ನ ಮನೆಯನ್ನೇ ಬದಲಾಯಿಸಲಾಗಿಲ್ಲವಲ್ಲ ಎಂದರೆ ಅವರ ಉತ್ತರ ಯಥಾ ರೀತಿಯಲ್ಲಿ ಅವರವರ ವೈಯಕ್ತಿಕ ಸ್ವಾತಂತ್ರ್ಯ ಅಂತಾರೆ!ಆದರೆ ಇವರಿಗೆ ಬೇರೆಯವರು ಮಾತ್ರ ಬದಲಾಗಬೇಕು.ಕೆಲವು “ಮೂರ್ಖರು” ಇವರನ್ನು ಬೆಂಬಲಿಸುತ್ತಾ ಬೌದ್ದಿಕತೆಯ ಕೋಡುಗಳನ್ನು ಮೂಡಿಸಿಬಿಟ್ಟಿರುತ್ತಾರೆ.!
ಈ ದೇಶದ ಸಂವಿಧಾನದ ಅಧೀನಕ್ಕೊಳಪಟ್ಟು ಪ್ರಜೆಗಳ ಪ್ರತಿನಿಧಿಯಾದ ಕೇಜ್ರಿವಾಲ್ ಈ ಹಿಂದೆ ಒಂದು ಅದ್ಬುತ ಹೇಳಿಕೆಯೊಂದನ್ನು ನೀಡಿದ್ದರು:ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದು ಭಾರತ ಸರ್ಕಾರ ಸೇನೆಯನ್ನು ವಾಪಸ್ಸು ಹಿಂತೆಗೆದುಕೊಳ್ಳಬೇಕು ಎಂದು!ಸ್ನೇಹಿತರೆ,ಈ ಹೇಳಿಕೆಯ ಆಳಕ್ಕಿಳಿದು ಒಂದು ಸಲ ಯೋಚನೆ ಮಾಡಿನೋಡಿ.ದೆಹಲಿಯ ಈ ಮೂರ್ಖ ದೊರೆಯ ಮಾತಿನ ಹಿಂದಿರುವ ಇಂಗಿತ ತಕ್ಷಣವೇ ಅರ್ಥವಾಗುತ್ತದೆ. ಯಥಾ ರೀತಿಯಲ್ಲಿ ಮುಸ್ಲಿಂ ತುಛ್ಛೀಕರಣದ ಪರಮ ಸತ್ಯ ಬಯಲಾಗುತ್ತದೆ.ಭಾರತ ಮತ್ತು ಪಾಕಿಸ್ತಾನ ವಿಭಜನೆಗೊಂಡ ದಿನದಿಂದಲೂ ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಸೈನ್ಯವನ್ನು ನಿಯೋಜನೆಗೊಳಿಸಲಾಗಿದೆ.
ಭಾರತದ ಒಂದು ರಾಜ್ಯವಾಗಿದ್ದ ಪಾಕಿಸ್ತಾನ ಮಹ್ಮದ್ ಅಲಿ ಜಿನ್ನಾ ಮತ್ತು ಬ್ರಿಟಿಷ್ ದೊರೆಗಳ ತಂತ್ರಗಳಿಂದ ಪ್ರತ್ಯಕ ದೇಶವೆಂದು ಘೋಷಿತವಾದ ಮೇಲೆ ಭಾರತದ ವಿರುದ್ದವೆ ೧೯೬೭ರಲ್ಲಿ ಯುದ್ದ ಘೋಷಿಸಿತು.ತದನಂತರ ಕಾರ್ಗಿಲ್ ಯುದ್ದ;ಭಾರತದ ಪಾಲಿಗೆ ಒಂದು ಕ್ಯಾನ್ಸರ್ ವ್ಯಾದಿಯಾಗಿ ಸದಾ ಕಾಡುತ್ತಿರುವ ಆ ದೇಶ ಮತ್ತದರ ಸೈನಿಕರನ್ನು ಸರಿಯಾದ ರೀತಿಯಲ್ಲಿ ಪ್ರತಿಬಂಧಿಸದೆ ಹೋದರೆ ದೆಹಲಿಯವರೆಗೆ ತನ್ನ ಸೈನ್ಯ ನುಗ್ಗಿಸಿ ನಾಶವನ್ನು ಸೃಷ್ಟಿಸುವುದನ್ನು ಅಲ್ಲಗಳೆಯುವಂತಿಲ್ಲ.
ಜಮ್ಮು ಮತ್ತು ಕಾಶ್ಮೀರದಿಂದ ಸೈನ್ಯ ವಾಪಸ್ಸು ಪಡೆದುಕೊಂಡರೆ ಆಗುವ ದುರಂತದ ಬಗ್ಗೆ ಒಂದನೆಯ ತರಗತಿಯ ಮಗುವನ್ನು ಕೇಳಿದರೂ ಹೇಳುತ್ತದೆ!ಆದರೆ ಕೇಜ್ರಿವಾಲ್ ಸೇರಿದಂತೆ ಈ ದೇಶದ ಹಲವು ಬುದ್ದಿಜೀವಿಗಳು ಮಾನವ ಹಕ್ಕುಗಳು ಮತ್ತು ಸೈನ್ಯ ನಡೆಸುವ ವಿದ್ವಂಶದ ಬಗ್ಗೆ ಹೇಳುತ್ತಾರೆಯೆ ಹೊರತು ಸೈನ್ಯದ ಮೇಲೆ ನಿರಂತರವಾಗಿ ಆ ರಾಜ್ಯದ ಪ್ರಜೆ ನಡೆಸುವ ಕಲ್ಲು ತೂರಾಟದ ಬಗ್ಗೆ ಹೇಳುವುದಿಲ್ಲ.
ನಿಜ!ಕಾಶ್ಮೀರ ೩೭೦ನೇ ವಿಧಿಯ ಅನ್ವಯ ಭಾರತ ಸರ್ಕಾರಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದೆ.ಹೀಗೆ ರೌರವ ಕಾಷ್ಠವನ್ನು ಸೃಷ್ಟಿಸಿದ್ದು ಆಗಿನ ಸ್ವತಂತ್ರ ಭಾರತದ ಪ್ರಥಮ ಪ್ರಜೆಯ ಮೂರ್ಖ ಬುದ್ದಿಯೆ!ಮುಂದಾಲೊಚನೆಯಿಂದ ಹೈದರಾಬಾದ್ ವಿಲೀನದಂತೆ ಸರ್ದಾರ್ ವಲ್ಲಭಭಾಯಿ ಪಟೇಲರ ತಂತ್ರ ಅನುಸರಿಸಿದ್ದರೆ ವಿಶೇಷ ಅನುಧಾನದಲ್ಲಿ ತಿಂದ ಮನೆಯ ಗಳ ಎಣಿಸುವ ರಾಜ್ಯವಾಗಿ ಕಾಶ್ಮೀರ ಪರಿಣಮಿಸುತ್ತಿರಲಿಲ್ಲ.
ಕಾಶ್ಮೀರ ಸಮಸ್ಯೆಯೂ ಜೀವಂತವಾಗಿರಲಿಕ್ಕೆ ಬಹು ಮುಖ್ಯ ಕಾರಣವೆಂದರೆ ಆಜಾದಿ ಹೆಸರಿನಲ್ಲಿ ಪಾಕಿಸ್ತಾನದ ರಾಜಕೀಯ ಮತ್ತು ಆರ್ಥಿಕ ನೆರವು ಕೆಲವು ಮುಖಂಡರಿಗೆ ದೊರೆಯುತ್ತಿರುವುದು ಮತ್ತವರು ಅದರಿಂದ ಸಮೃದ್ಧ ಜೀವನ ನಡೆಸುತ್ತಿರಯವುದು!ನಿಜವೆ, ಪಾಕಿಸ್ತಾನ ಸರ್ಕಾರ ಕಾಶ್ಮೀರದಲ್ಲಿ ವಿದ್ವಂಶ ಸೃಷ್ಟಿಸಲು ವಾರ್ಷಿಕ ಐದು ನೂರು ಕೋಟಿ ರೂಪಾಯಿಗಳ ನೆರವು ನೀಡುತ್ತಿದೆ ಎನ್ನುವುದು ಒಂದು ಅಂದಾಜು! ಅದನ್ನು ಪ್ರತಿಬಂಧಿಸಲು ಭಾರತ ಸರ್ಕಾರ ಸೈನ್ಯ ಹಾಗೂ ಇತರ ಖರ್ಚುಗಳಿಗಾಗಿ ವಾರ್ಷಿಕ ಸಾವಿರಾರು ಕೋಟಿಯ ಹಣ ವಿನಯೋಗಿಸುತ್ತದೆ.
ಈ ಹಣ ಆರ್ಮಿ ಛೀಫ್ಗಳಿಗೆ ಹಾಗೂ ಕೆಲವು ರಾಜಕೀಯ ಮುಖಂಡರ ಜೇಬು ಸೇರುತ್ತದೆ ಎನ್ನುವುದು ಕೂಡಾ ಪರಮ ಸತ್ಯ.ಅದಕ್ಕೆಂದೇ ಇಂತಹ ಸಮಸ್ಯೆಗಳನ್ನು ಜೀವಂತವಾಗಿರುವಂತೆ “ಕೆಲವರು” ನೋಡಿಕೊಳ್ಳುತ್ತಾರೆ.
ಇಷ್ಟಕ್ಕೂ ಕಾಶ್ಮೀರದ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಬೊಬ್ಬೆ ಹೊಡೆಯುವ ಎಡ ಚಿಂತಕರು ಗಡಿ ಪ್ರದೇಶಗಳಿಂದ ಸೈನ್ಯ ಹಿಮ್ಮಪಡೆದರೆ ಆಗುವ ಅನಾಹುತದ ಬಗ್ಗೆ ಏನು ಹೇಳುತ್ತಾರೆ?ದೇಶ ಇಬ್ಬಾಗವಾದ ದಿನಗಳಿಂದಲೂ ಕಾಶ್ಮೀರ ಕಣಿವೆಗಳಲ್ಲಿ ರಕ್ತ ಹರಿಯುತ್ತಲೇ ಇದೆ.
ಉಗ್ರ ಚಟುವಟಿಕೆಗಳು ಸ್ವಾತಂತ್ರ್ಯದ ಹೆಸರಿನಲ್ಲಿ ಪುಂಡರು ನಡೆಸುವ ಕೃತ್ಯಗಳು ಹಾಗೂ ಅಲ್ಲಿನ ಸ್ಥಳೀಯ ಜನರ ಇಬ್ಬಂದಿ ನೀತಿಯ ಕುರಿತು ಎಲ್ಲಾ ಚಿಂತಕರೂ ಯೋಚಿಸಬೇಕಿದೆ.ಪ್ರವಾಸಿಗರ ಸುಂದರ ತಾಣವಾದ ಕಾಶ್ಮೀರ ಭಯ ಮುಕ್ತವಾಗುವ ದಿನಗಳ ಕುರಿತು ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಈ ಕುರಿತು ಯೋಚಿಸಲು ಕುಳಿತಾಗ ಹೊಳೆದ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುವ ಪ್ರಯತ್ನ ನಂದು….
(ಇನ್ನೂ ಬಹಳಷ್ಟಿದೆ.)
–ಲಕ್ಷ್ಮೀಕಾಂತ_ನಾಯಕ