ಹುಲಿಜಂತಿ ಜಾತ್ರೆಗೆ ವಿಶೇಷ ಬಸ್ ಸೌಕರ್ಯ
ಅ,26 ರಿಂದ 29 ರವರೆಗೆ ಹುಲಿಜಂತಿ ಜಾತ್ರೆ ಸಂಭ್ರಮ
ಯಾದಗಿರಿ: ಮಹಾರಾಷ್ಟ್ರ ರಾಜ್ಯದಲ್ಲಿರುವ ಹುಲಿಜಂತಿ ಶ್ರೀ ಮಾಳಿಂಗರಾಯ ದೇವರ ಜಾತ್ರೆಯು ಅಕ್ಟೋಬರ್ 26ರಿಂದ 29ರವರೆಗೆ ನಡೆಯಲಿದ್ದು, ಜಾತ್ರೆಗೆ ಹೋಗಿ ಬರುವ ಭಕ್ತಾಧಿಗಳಿಗೆ ಸಾರಿಗೆ ಅನುಕೂಲಕ್ಕಾಗಿ ಯಾದಗಿರಿ ವಿಭಾಗದಿಂದ 41 ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರೆಗೆ ಹೊರಡುವ ವಿಶೇಷ ಬಸ್‍ಗಳು ಯಾದಗಿರಿ, ಶಹಾಪೂರ, ಸುರಪೂರ, ಗುರುಮಠಕಲ್ ಬಸ್ ನಿಲ್ದಾಣ ಸೇರಿದಂತೆ ವಿಭಾಗದ ಇತರೆ ಪ್ರಮುಖ ಬಸ್ ನಿಲ್ದಾಣಗಳಿಂದ ಸಂಚಾರ ಮಾಡಲಿವೆ. ಯಾವುದೇ ಗ್ರಾಮದಿಂದ 50 ಜನ ಪ್ರಯಾಣಿಕರು ಒಟ್ಟಿಗೆ ಪ್ರಯಾಣಿಸಿದಲ್ಲಿ ಆ ಗ್ರಾಮದಿಂದಲೆ ನೇರವಾಗಿ ಹುಲಿಜಂತಿ ಶ್ರೀ ಮಾಳಿಂಗರಾಯ ದೇವರ ಜಾತ್ರೆಗೆ ಬಸ್ ಕಾರ್ಯಾಚರಣೆ ಮಾಡಲಾಗುವುದು. ಆದ್ದರಿಂದ ಭಕ್ತಾದಿಗಳು ವಿಶೇಷ ಬಸ್‍ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ಯಾದಗಿರಿ ಮೊ:77609 92463, ಶಹಾಪೂರ ಮೊ:77609 92464, ಗುರುಮಠಕಲ್ 77609 92465, ಸುರಪೂರ 77609 92467, ವಿಭಾಗೀಯ ಸಂಚಲನಾಧಿಕಾರಿ 77609 92452, ಸಹಾಯಕ ಸಂಚಾರ ವ್ಯವಸ್ಥಾಪಕರು 77609 92458 ಹಾಗೂ ವಿಭಾಗೀಯ ಕಚೇರಿ 77609 92449 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.