ರಸ್ತೆ ದಾಟಲು ಹೋದ ಬೈಕ್ ಸವಾರ ಕಾಲುವೆಗೆ ಬಿದ್ದು ಅವಘಡ
ಶಹಾಪುರಃ ಕೆರೆ ತುಂಬಿ ರಸ್ತೆ ಮೇಲೆ ಹರಿಯುತ್ತಿರುವ ಕಾಲುವೆ ನೀರು, ಕಾಲುವೆಗೆ ಬಿದ್ದ ಬೈಕ್ ಸವಾರ
ಯಾದಗಿರಿಃ ಯಾದಗಿರಿ-ವಿಜಯಪುರ ಸಂಪರ್ಕ ರಸ್ತೆಯಲ್ಲಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಬಳಿ ಕೆರೆ ತುಂಬಿದ ಕಾಲುವೆ ನೀರು ರಸ್ತೆ ಮೇಲೆ ಹರಿಯುತ್ತಿದ್ದ, ರಸ್ತೆ ದಾಟಲು ಹೋದ ಬೈಕ್ ಸವಾರನೋರ್ವ ಕಾಲುವೆಗೆ ಬಿದ್ದ ಘಟನೆ ನಡೆದಿದೆ.
ಸಾರ್ವಜನಿಕರು ಹರಸಾಹಸ ಪಟ್ಟು ಬೈಕ್ ಸಮೇತ ಸವಾರನ ಪ್ರಾಣ ಉಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಕಾಲುವೆಗೆ ಬಿದ್ದ ಯುವಕನನ್ನು ಸ್ಥಳೀಯರು ಕಾಪಾಡಿದ್ದಾರೆ. ಹಗ್ಗ ಕಟ್ಟಿ ಬೈಕ್ ಮೇಲೆತ್ತಿದ್ದಾರೆ. ಬೈಕ್ ಸವಾರನನನ್ನು ನೀರಿನಿಂದ ಹೊರ ತೆಗೆಯುವ ಮೂಲಕ ಆತನ ಪ್ರಾಣ ಉಳಿದಿದೆ ಎನ್ನಲಾಗಿದೆ.
ಕೆಂಭಾವಿ ಪಟ್ಟಣದ ಧರ್ಮಣ್ಣ ಹೊಸಮನಿ ಎಂಬಾತನೇ ಬೈಕ್ ಸಮೇತ ಕಾಲುವೆಗೆ ಬಿದ್ದ ಸವಾರ ಎನ್ನಲಾಗಿದೆ. ಸ್ಥಳೀಯರ ಸಹಾಯದಿಂದ ಪ್ರಾಣಪಯಾದಿಂದ ಪಾರಾಗಿದ್ದಾನೆ. ಕೃಷ್ಣಾ ಎಡದಂಡೆ ಕಾಲುವೆ ಮೂಲಕ ಹರಿಯುವ ನೀರು ಗೋಗಿ ಗ್ರಾಮದ ಮೇಲಿನ ಕೆರೆ ತುಂಬಿ ರಸ್ತೆಗೆ ನೀರು ನುಗ್ಗಿವೆ.
ಕಳೆದ ಇಪ್ಪತ್ತು ವರ್ಷಗಳಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಪರದಾಟ ತಪ್ಪಿಸಲು ಸಾಧ್ಯವಾಗಿಲ್ಲ. ಸಣ್ಣ ಸೇತುವೆಯೊಂದು ಇಲ್ಲಿದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸೇತುವೆ ಆವರಿಸಿಕೊಂಡು ರಸ್ತೆ ಮೇಲೆ ನೀರು ಬರುತ್ತವೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನೂತನ ಎತ್ತರವಾದ ಸೇತುವೆ ನಿರ್ಮಿಸುವ ಅಗತ್ಯವಿದೆ. ಕಳೆದ ತಿಂಗಳಿನಿಂದ ಈ ರಸ್ತೆಯಲ್ಲಿ ಅವಘಡ ಸಂಭವಿಸುತ್ತಲೇ ಇವೆ. ಆದಾಗ್ಯು ಯಾರೊಬ್ಬರು ಈ ಕುರಿತು ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಪ್ರಾಯಾಣಿಕರು ದೂರಿದ್ದಾರೆ.
ಮಾಜಿ ಸಚಿವರ ಸ್ವಗ್ರಾಮ ದರ್ಶನಾಪುರಕ್ಕೆ ತೆರಳುವ ಮಾರ್ಗ.!
ಇದೇ ರಸ್ತೆ ಮೂಲಕ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಸ್ವಾಗ್ರಮ ದರ್ಶನಾಪುರಕ್ಕೆ ತೆರಳುವ ಮಾರ್ಗವು ಇದೆ ಆಗಿದೆ. ಅಲ್ಲದೆ ಕೆಂಭಾವಿ, ಚಾಮನಾಳ ಪಟ್ಟಣ ಸಏರಿದಂತೆ ಗೋಗಿ ಜಿಪಂ ವ್ಯಾಪ್ತಿ ಸಂಚರಿಸಲು ಈ ಮಾರ್ಗ ಅನಿವಾರ್ಯ.
ಗೋಗಿ ಜಿಪಂ ವ್ಯಾಪ್ತಿ ಸೇರಿದಂತೆ ಈ ಎಲ್ಲಾ ಭಾಗದದಲ್ಲಿ ದರ್ಶನಾಪುರರ ಪ್ರಭಾವ ಜಾಸ್ತಿ ಇದೆ. ಆದಾಗ್ಯು ಕಳೆದ 20 ವರ್ಷಗಳಿಂದ ರಸ್ತೆ ಸುಧಾರಣೆ ಕಾಣದಿರುವುದು ಮಾತ್ರ ದುರಂತ.
ಈ ರಸ್ತೆಯಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿವೆ. ಹಾಳಿ ಶಾಸಕ ಮತ್ತು ಮಾಜಿ ಸಚಿವರಿಬ್ಬರು ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ರÀಸ್ತೆ ಸುಧಾರಣೆ ಕಾರ್ಯಕ್ಕೆ ಮುಂದಾಗುವರೇ ಕಾದು ನೋಡಬೇಕು.




