ಮನುಷ್ಯನ 1ಲೀಟರ್ ಮೂತ್ರಕ್ಕೆ 1 ರೂ. ಬೆಲೆ..!
ಮೂತ್ರ ಬ್ಯಾಂಕ್ ತೆರೆಯಲು ಕೇಂದ್ರ ಸರ್ಕಾರ ಸಿದ್ಧತೆ.!
ದೇಶದಾದ್ಯಂತ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಮನುಷ್ಯನ ಮೂತ್ರ ಬ್ಯಾಂಕ್ ತೆರೆಯುವ ನೂತನ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆಯಂತೆ. ಮನುಷ್ಯನ ಮೂತ್ರದಿಂದ ಯೂರಿಯಾ ತಯಾರಿಸುವ ಮೂಲಕ ಯೂರಿಯಾ ಆಮದು ಕಡಿಮೆಗೊಳಿಸಿ ದೇಶದಲ್ಲಿಯೇ ಯೂರಿಯಾ ತಯಾರಿಸುವ ಗುರಿ ಹೊಂದಲಾಗಿದೆ ಎನ್ನಲಾಗಿದೆ.
ಹೀಗಾಗಿ ಮೂತ್ರ ಬ್ಯಾಂಕ್ ತೆರೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಮನುಷ್ಯನ 1 ಲೀಟರ್ ಮೂತ್ರಕ್ಕೆ 1 ರೂ. ಬೆಲೆ ನಿಗದಿಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದೇನಪಾ ಮೂತ್ರ ಬ್ಯಾಂಕ್ ಎಂದು ಮೂಗು ಮುರಿಯಬೇಡಿ. ನಿಜವಾಗಿಯೂ ಮೂತ್ರ ಬ್ಯಾಂಕ್ ಯೋಜನೆ ಜಾರಿ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾದ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ನಾಗ್ಪೂರದಲ್ಲಿ ಮೊದಲ ಪ್ರಾಯೋಗಿಕ ಮೂತ್ರ ಬ್ಯಾಂಕ್ ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮನುಷ್ಯನ ಮೂತ್ರದಿಂದ ಯೂರಿಯಾ ತಯಾರಿಸುವ ಯೋಜನೆ ರೂಪಿಸಲಾಗುತ್ತಿದೆ. ಹೀಗಾಗಿ ಮನುಷ್ಯನ 1 ಲೀಟರ್ ಮೂತ್ರಕ್ಕೆ 1 ರೂ. ಬೆಲೆ ನಿಗದಿ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಗಡ್ಕರಿ ಅವರು ತಿಳಿಸಿದ್ದಾರೆ. ಪರಿಣಾಮ ಇನ್ಮುಂದೆ ಮನುಷ್ಯನ ಮೂತ್ರಕ್ಕೂ ಭಾರೀ ಡಿಮ್ಯಾಂಡ್ ಬರಲಿದೆ. ಹೀಗಾಗಿ, ಎಲ್ಲೆಂದರಲ್ಲಿ ಮೂತ್ರವಿಸರ್ಜನೆ ಮಾಡಿ ಪರಿಸರ ಮಲೀನ ಮಾಡುವ ಮಂದಿ ಅದೇ ಮೂತ್ರ ಸಂಗ್ರಹಿಸಿ ಮೂತ್ರ ಬ್ಯಾಂಕಿಗೆ ನೀಡಿದರೆ ದುಡ್ಡೂ ಬರುತ್ತದೆ. ಪರಿಸರವೂ ಸ್ವಚ್ಛವಾಗಿರುತ್ತದೆ ಅಲ್ಲವೇ. ನಿವೇನಂತೀರಿ?