Homeಅಂಕಣಜನಮನಮಹಿಳಾ ವಾಣಿ
ನೆಲ್ಲಿಕಾಯಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ

ನೆಲ್ಲಿಕಾಯಿಯೂ ವಿಟಮಿನ್-ಸಿ ಯನ್ನು ಹೊಂದಿದ್ದು ಇದು ದೃಷ್ಟಿಗೆ, ಕೂದಲಿಗೆ, ಚರ್ಮದ ಆರೋಗ್ಯಕ್ಕೆ ಉಪಯುಕ್ತವಾಗಿದೆ.
ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಅಂಶವು ಕೊಲಾಜಿನ್ ಉತ್ಪಾದನೆಯನ್ನು ಪ್ರಜೋದಿಸುತ್ತದೆ. ಇದರಿಂದ ಚರ್ಮದಲ್ಲಿ ಸುಕ್ಕು ಕಾಣಿಸುವುದು ಕಡಿಮೆಯಾಗುತ್ತದೆ. ಕೂದಲ ಬೆಳವಣಿಗೆಗೆ ನೆಲ್ಲಿಕಾಯಿ ಪ್ರಸಿದ್ಧವಾದುದು. ನೆಲ್ಲಿಕಾಯಿ ಎಣ್ಣೆ ತಲೆಗೆ ಹಾಕುವುದರಿಂದ ತಲೆಯ ಚರ್ಮದ ಆರೋಗ್ಯ ಹೆಚ್ಚಾಗಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕೂದಲೆಳೆಗಳ ಬುಡವನ್ನು ಸದೃಢ ಮಾಡಿ, ಕೂದಲು ತುಂಡಾಗದಂತೆ ಅಥವಾ ಉದುರದಂತೆ ತಡೆಯುತ್ತದೆ.