ಪ್ರಮುಖ ಸುದ್ದಿ
ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕ
ರಸ್ತೆ ಅಪಘಾತ ಕಾಲು ಮುರಿದುಕೊಂಡ ಬೈಕ್ ಸವಾರ
ಯಾದಗಿರಿ, ಶಹಾಪುರಃ ನಗರದಿಂದ ಬೈಕ್ ಮೇಲೆ ದೇವದುರ್ಗಾದ ಸ್ವಗ್ರಾಮಕ್ಕೆ ತೆರಳುವಾಗ ಮಾರ್ಗ ಮಧ್ಯ ಬೈಕ್ ಸ್ಕಿಡ್ ಆಗಿ ರಸ್ತೆ ಸಾವರಿಸಿಕೊಂಡು ಬಿದ್ದ ಪರಿಣಾಮ ಸವಾರನ ಎಡಬದಿ ಕಾಲು ಮುರಿದ ಘಟನೆ ಬೀರನೂರ ಕ್ರಾಸ್ ಹತ್ತಿರ ಬುಧವಾರ ಮದ್ಯಾಹ್ನ ನಡೆದಿದೆ.
ಬೈಕ್ ಸವಾರ ತಿರುವಿನಲ್ಲಿ ಸಾಗುತ್ತಿರುವಾಗ ಈ ಘಟನೆ ಜರುಗಿದೆ. ಗೋವಿಂದ ತಂದೆ ಚಕ್ರಪತಿ (24) ಎಂಬ ಸವಾರನೆ ಅಪಘಾತದಲ್ಲಿ ಕಾಲು ಕಳೆದುಕೊಂಡ ದುರ್ದೈವಿ. ಬೈಕ್ ಸ್ಕಿಡ್ ಆಗಿ ಬಿದ್ದ ರಭಸಕ್ಕೆ ಕಾಲು ಎಡಗಾಲು ಮುರಿದಿದೆ ಎಂದು ಹೇಳಲಾಗುತ್ತಿದೆ.
ಬೈಕ್ ಸವಾರ ಮೂಲತಃ ದೇವದುರ್ಗ ತಾಲೂಕಿನ ಪೆಂಗ್ಲಾಪುರ ತಾಂಡಾ ನಿವಾಸಿಯಾಗಿದ್ದು, ಶಹಾಪುರ ನಗರಕ್ಕೆ ಕೆಲಸ ನಿಮಿತ್ತ ಆಗಮಿಸಿದ್ದ ಎನ್ನಲಾಗಿದೆ. ಕೆಲಸ ಮುಗಿಸಿಕೊಂಡು ವಾಪಾಸ್ ಸ್ವಗ್ರಾಮಕ್ಕೆ ತೆರಳುವ ಸಂದರ್ಭ ಈ ಘಟನೆ ನಡೆದಿದೆ. ಕಾಲು ಕಳೆದುಕೊಂಡ ಸವಾರ ಗೋವಿಂದನನ್ನು ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಶಹಾಪುರ ಪೊಲೀಸ್‍ರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.