ಪ್ರಮುಖ ಸುದ್ದಿ
ಮತ್ತೆ ದೆಹಲಿಗೆ BSY ದೌಡು : ಮೂವರು ಉಪಮುಖ್ಯಮಂತ್ರಿ ಸೃಷ್ಠಿ!?
ಬೆಂಗಳೂರು: ಸಚಿವ ಸಂಪುಟ ರಚನೆ ಹದಿನೈದು ದಿನಗಟ್ಟಲೇ ಸಮಯ ಪಡೆದ ಸಿಎಂ ಯಡಿಯೂರಪ್ಪ ನೂತನ ಸಚಿವರಿಗೆ ಖಾತೆ ಹಂಚುವಲ್ಲಿಯೂ ವಿಳಂಬವಾಗುತ್ತಿದೆ. ಹೈಕಮಾಂಡ್ ಸೂಚನೆ, ಬಿಜೆಪಿ ಶಾಸಕರ ಅಸಮಾಧಾನ, ಅನರ್ಹ ಶಾಸಕರ ಕಿಡಿಯಿಂದಾಗಿ ಪ್ರತಿ ಹೆಜ್ಜೆಯೂ ಅಳೆದು ತೂಗಿ ಇಡುವಂತಾ ಸ್ಥಿತಿ ನಿರ್ಮಾಣ ಆಗಿದೆ. ಈ ನಡುವೆ ಬಿಜೆಪಿ ರಾಷ್ಟೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೊಸ ತಂತ್ರಹೂಡಿದ್ದು ಆಂಧ್ರ ಮಾದರಿಯಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ಪ್ಲಾನ್ ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಈಗ ರಾಜ್ಹ ಬಿಜೆಪಿ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಮತ್ತೆ ದೆಹಲಿಗೆ ತೆರಳಿದ್ದು ಹೈಕಮಾಂಡ್ ಜತೆ ಎಲ್ಲಾ ವಿಚಾರಗಳ ಜತೆ ಚರ್ಚೆ ನಡೆಸಲಿದ್ದಾರೆ. ಆದರೆ, ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ನಾಳೆ ಫೈನಲ್ ಆಗಲಿದೆ ಎಂದು ತಿಳಿದು ಬಂದಿದೆ.