ಪ್ರಮುಖ ಸುದ್ದಿ
ರಾಜ್ಯ ಬಿಜೆಪಿ ಸರ್ಕಾರದಿಂದ ನಟಿ ತಾರಾ & ಶೃತಿ ಗೆ ಬಂಪರ್ ಗಿಫ್ಟ್..ಏನ್ ಗೊತ್ತಾ.?
ರಾಜ್ಯ ಬಿಜೆಪಿ ಸರ್ಕಾರದಿಂದ ನಟಿ ತಾರಾ & ಶೃತಿ ಗೆ ಬಂಪರ್ ಗಿಫ್ಟ್..ಏನ್ ಗೊತ್ತಾ.?
ವಿವಿಡೆಸ್ಕ್ಃ ರಾಜ್ಯ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದ, ಚುನಾವಣೆ ಸಂದರ್ಭದಲ್ಲಿ ಭರ್ಜರಿ ಪ್ರಚಾರವು ಮಾಡಿದ್ದ ಬಿಜೆಪಿಯ ತಾರಾ ನಾಯಕಿಯರಾದ ನಟಿ ತಾರಾ ಹಾಗೂ ಶೃತಿ ಅವರಿಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ.
ನಟಿ ತಾರಾ ಅನುರಾಧ ಅವರನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ನೇಮಕ ಮಾಡಿದ್ದು, ಮತ್ತು ನಟಿ ಶೃತಿ ಅವರನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಆಯ್ಕೆ ಮಾಡಿ ಆದೇಶ ಹೊತಡಿಸಿದೆ.
ಈ ಹಿನ್ನೆಲೆ ಮಹಿಳಾ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಹರ್ಷ ಉಂಟಾಗಿದೆ.