ದೇಹದ ತೂಕ ಇಳಿಕೆಗೆ ಆಲೂಗಡ್ಡೆ ತುಂಬಾನೇ ಸಹಕಾರಿ ಹೇಗೆ ಗೊತ್ತಾ?

ಆಲೂಗಡ್ಡೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿದೆ. ನಾರಿನಂಶ ಉತ್ತಮ ಜೀರ್ಣಕ್ರಿಯೆಗೆ ಬೇಕೇಬೇಕು. ಅಷ್ಟೇ ಅಲ್ಲ, ನಾರಿನಂಶ ಸಮೃದ್ಧವಾಗಿದ್ದರೆ ಬಹಳ ಹೊತ್ತಿನವರೆಗೆ ಹೊಟ್ಟೆ ಫುಲ್ ಇದ್ದ ಅನುಭವವಾಗುತ್ತದೆ. ಹೀಗಾಗಿ ಆಗಾಗ ಮತ್ತೆ ತಿನ್ನಬೇಕೆನಿಸುವುದಿಲ್ಲ. ಒಂದು ಸಾಮಾನ್ಯ ಗಾತ್ರದ ಆಲೂಗಡ್ಡೆಯಲ್ಲಿ ಅಂದರೆ ನೂರು ಗ್ರಾಂ ಆಲೂಗಡ್ಡೆಯಲ್ಲಿ ೮೦ ಕ್ಯಾಲರಿಯಿದೆ.
ವಿಟಮಿನ್ ಸಿ ಯೂ ಸೇರಿದಂತೆ ಪೊಟಾಶಿಯಂ, ವಿಟಮಿನ್ ಬಿ6 ಇತ್ಯಾದಿಗಳೆಲ್ಲ ಇರುವ ಆಲೂಗಡ್ಡೆಯಲ್ಲಿಯೂ ಸಾಕಷ್ಟು ಪೋಷಕಾಂಶಗಳಿವೆ. ಇದರಲ್ಲಿರುವ ವಿಟಮಿನ್ ಸಿ ದೇಹದ ಬೆಳವಣಿಗೆ, ರೋಗನಿರೋಧಕತೆಗೆ, ಅಂಗಾಂಶಗಳ ಮರುರಚನೆಗೆ ಸಹಾಯ ಮಾಡಿದರೆ, ಪೊಟಾಶಿಯಂ ಮಾಂಸಖಂಡಗಳ ಹಿಗ್ಗು ಕುಗ್ಗುವಿಕೆಗೆ, ದೇಹದಲ್ಲಿರುವ ನೀರಿನಂಶವನ್ನು ಹಾಗೆಯೇ ಸಮತೋಲನದಲ್ಲಿ ಕಾಪಾಡಲು, ವಿಟಮಿನ್ ಬಿ೬ ಮಿದುಳಿನ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿವೆ. ಶಕ್ತಿಯ ಉತ್ಪಾದನೆಗೆ ಕಾರ್ಬೋಹೈಡ್ರೇಟ್ ಬೇಕೇ ಬೇಕು. ಆಲೂಗಡ್ಡೆಯಲ್ಲಿ ಇಂತಹ ಕಾರ್ಬೋಹೈಡ್ರೇಟ್ ಇದ್ದು ಇದು ಬಹಳ ಹೊತ್ತಿಗೆ ನಮಗೆ ಬೇಕಾದ ಶಕ್ತಿ, ಚೈತನ್ಯ ನೀಡುತ್ತದೆ.
ಆಲೂಗಡ್ಡೆಯಲ್ಲಿ ಕಡಿಮೆ ಕ್ಯಾಲರಿ ಇದೆ. ಅಂದಾಜು 100 ಗ್ರಾಂ ಆಲೂಗಡ್ಡೆಯಲ್ಲಿ 77 ಕ್ಯಾಲರಿ ಇರುತ್ತದೆ. ಇದರಲ್ಲಿ ಎರಡು ಗ್ರಾಂ ಪ್ರೊಟೀನ್ ಹಾಗೂ 2 ಗ್ರಾಂನಷ್ಟು ನಾರಿನಂಶ ಇದೆ. ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಫ್ರೈ ಮಾಡುವುದರಿಂದ ಖಂಡಿತ ತೂಕ ಹೆಚ್ಚಬಹುದು. ಆದರೆ, ಬೇಯಿಸಿ ತಿಂದರೆ ಈ ಪರಿಣಾಮ ಆಗದು. ಅಡುಗೆ ಮಾಡುವ ಮುನ್ನ 6-7 ಗಂಟೆಗಳ ಮೊದಲೇ ಆಲೂಗಡ್ಡೆತನ್ನು ಬೇಯಿಸಿ ತಣಿಯಲು ಬಿಡಿ. ತೂಕ ಇಳಿಸುವ ಮಂದಿ ನೀವಗಿದ್ದರೆ ಹೀಗೆ ಮಾಡಿ. ಅಷ್ಟೇ ಅಲ್ಲ, ಸ್ನ್ಯಾಕ್ ಸಮಯದಲ್ಲಿ ಆಲೂಗಡ್ಡೆಯನ್ನು ಬೇಯಿಸಿ ಮಾಡಿದ ಅಡುಗೆಯನ್ನು ಸೇವಿಸಬಹುದು. ಅನ್ನ, ಚಪಾತಿ, ಬ್ರೆಡ್ ಇತ್ಯಾದಿಗಳ ಜೊತೆ ಸೇರಿಸಿ ಆಲೂಗಡ್ಡೆ ತಿನ್ನಬಹುದು. ಹಾಗಾಗಿ, ಎಲ್ಲ ತರಕಾರಿಗಳಂತೆ ಆಲೂಗಡ್ಡೆಯನ್ನೂ ಆಗಾಗ ಹಿತಮಿತಾಗಿ ತಿನ್ನಬಹುದು. ತಿನ್ನಬೇಕು ಕೂಡಾ. ಆದರೆ, ಆಲೂಗಡ್ಡೆಯಿಂದ ತಯಾರಿಸಿದ ಹೆಚ್ಚು ಸಂಸ್ಕರಿಸಿದ ಪದಾರ್ಥಗಳಿಂದ ದೂರುವಿರಿ. ಎಣ್ಣೆಯಲ್ಲಿ ಫ್ರೈ ಮಾಡಿ ತಿನ್ನುವುದರಿಂದ ದೂರವಿರಿ. ತಿನ್ನಲು ಆಸೆಯಾದರೆ, ಎಣ್ಣೆಯಲ್ಲಿ ಕರಿಯುವ ಬದಲು ಏರ್ ಫ್ರೈ ಮಾಡಿ ಅಥವಾ ಬೇಕ್ ಮಾಡಿ ತಿನ್ನಬಹುದು.