ಪ್ರಮುಖ ಸುದ್ದಿ

ನವೆಂಬರವರೆಗೂ ಅನ್ನ ಯೋಜನೆ ವಿತರಣೆ, 90 ಸಾವಿರ‌ಕೋಟಿ ವೆಚ್ಚ – ಮೋದಿ ಘೋಷಣೆ

ಪ್ರಧಾನಿ ಮೋದಿ ಮಾತು ಪ್ರಮುಖ ಘೋಷಣೆ, ಉಚಿತ ಪಡಿತರ ವಿತರಣೆ

ಕೊರೊನಾ ಸಂಕಟ ಕಾಲದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲಬಾರದು. ಹೀಗಾಗಿ ಪ್ರತಿ ಕುಟುಂಬಕ್ಕೆ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಅಥವಾ ಗೋದಿ ಉಚಿತವಾಗಿ‌ ನೀಡಲಾಗುವದು. ಅಲ್ಲದೆ‌ ಪ್ರತಿ ತಗಳು ಕುಟುಂಬಕ್ಕೆ 1 ಕೆಜಿ ಬ್ಯಾಳಿ ಸಹ ವಿತರಿಸಲಾಗುವದು.‌ ಒಟ್ಟಾರೆ 80 ಕೋಟಿ ಜನರಿಗೆ ನವೆಂಬರವರೆಗೂ ಪಡಿತರ ವಿತರಣೆ‌ ವಿಸ್ತರಿಸಲಾಗಿದೆ.

ವಿವಿ ಡೆಸ್ಕ್ಃ ‌ದೇಶದ ವಾಸಿಕರೇ ನಿಮ್ಮ ಬಗ್ಗೆ ನೀವೆ ಕಾಳಜಿವಹಿಸಿ, ನಿಮ್ಮತ್ತ ಧ್ಯಾನವಿರಲಿ‌ ಎಂದು ಪ್ರಧಾನಿ ಮೋದಿ ಮಾತು ಎಲ್ಲರಿಗು ಕೈ ಮುಗಿಯುತ್ತಾ ಮಾತು ಆರಂಭಿಸಿದರು.

ಕೊರೊನಾ‌ ಮಹಾಮಾರಿ ವಿರುದ್ಧ ಹೊರಾಡುತ್ತಾ‌ ಅನ್ ಲಾಕ್ ದತ್ತ ಬಂದಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಉತ್ತಮವಿದೆ. ಇಷ್ಟಾದರೂ ಸಾರ್ವಜನಿಕರು ನಿಯಮಗಳನ್ನು ಪಾಲಿಸದೆ ನಿರ್ಲಕ್ಷವಹಿಸುತ್ತಿರುವದು ಜಾಸ್ತಿಯಾಗಿದೆ.

ಕಂಟೋನ್ಮೆಂಟ್ ಜೋನ್ ಗಳ‌ ಮೇಲೆ ಹೆಚ್ಚಿನ ನಿಗಾವಹಿಸಬೇಕಿದೆ.
ಜನರ ನಿರ್ಲಕ್ಷ್ಯ ಜಾಸ್ತಿಯಾಗಿದೆ. ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.

ಪ್ರಧಾನಿಯಾಗಲಿ ಸಾಮಾನ್ಯರಾಗಲಿ ಕಾನೂನು, ನಿಯಮ‌ ಉಲ್ಲಂಘನೆ ಸರಿಯಲ್ಲ. ಕಾನೂನುಕ್ಕಿಂತ ಯಾರು ದೊಡ್ಡವರಲ್ಲ.ಪ್ರ ಧಾನ ಮಂತ್ರಿ ಗರೀಬ‌ ಕಲ್ಯಾಣ ಯೋಜನೆ ಆರಂಭದಿಂದಲೇ ಜಾರಿಗೆ ತರಲಾಗಿದೆ. ಜನರ ನಿರ್ಲಕ್ಷ್ಯ ಆತಂಕಕಾರಿಯಾಗಿದೆ.

20 ಕೋಟಿ ಜನಧನ್ ಖಾತೆಗೆ ಹಣ ಸಂದಾಯ ಮಾಡಲಾಗಿದೆ. ಅಲ್ಲದೆ ಮುಕ್ತವಾಗಿ ರೇಷನ್ ವಿತರಿಸಲಾಗಿದೆ. ನಾನು ಈಗ ಮಹತ್ವದ ಘೋಷಣೆ ಮಾಡಲಿದ್ದೇನೆ.

ಪ್ರಧಾನ ಮಂತ್ರಿ ಗರೀಬ‌ ಕಲ್ಯಾಣ ಯೋಜನೆಯಡಿ ಜುಲೈ,‌ ಆಗಸ್ಟ್,‌ ಸೆಪ್ಟೆಂಬರ್ ಆಗಸ್ಟ್ ‌ನವೆಂಬರ್ ವರೆಗೂ ಈ‌ ಯೋಜನೆಯಡಿ ಮುಕ್ತವಾಗಿ‌ 5 ಕೆಜಿ ಗೋದಿ ಅಥವಾ 5 ಕೆಜಿ ಅಕ್ಕಿ ಜೊತೆಗೆ ಪ್ರತಿ ತಿಂಗಳು 1 ಕೆಜಿ ಬ್ಯಾಳಿಯು ಮುಕ್ತವಾಗಿ ಬಡವರಿಗೆ‌ ವಿತರಿಸಲಾಗುವದು ಎಂದು ತಿಳಿಸಿದರು.

ಈ‌ ಯೋಜನೆಗೆ ಅಂದಾಜು ಒಂದುವರೆ ಲಕ್ಷ ಕೋಟಿ ವೆಚ್ಚ ತಗುಲಲಿದೆ. ಗರೀಬ ಕಲ್ಯಾಣ ಅನ್ನ ಯೋಜನೆ ನವೆಂಬರ್ ವರೆಗೂ ಮುಂದುವರೆಸಲು ಘೋಷಣೆ ಮಾಡಿದರು.
ನಮ್ಮ ದೇಶದ 80 ಕೋಟಿ‌ಮಂದಿಗೆ ಪಡಿತರ ವ್ಯವಸ್ಥೆ ಮಾಡಲಾಗುತ್ತಿದೆ.

ಒಂದೇ ದೇಶ ಒಂದೇ ಪಡಿತರ ಘೋಷವಾಕ್ಯದೊಂದಿಗೆ ಬಡವರ ಮತ್ತು ದೇಶದ ರೈತರ ಬಗ್ಗೆ ಕಾಳಜಿವಹಿಸಿ ಯೋಜನೆ ಮುಂದುವರೆಸಲಾಗಿದೆ ಎಂದರು. ದೇಶದ ಮಹಿಳೆಯರು, ಆರ್ಥಿಕವಾಗಿ‌ ಹಿಂದುಳಿದವರು ಕೈಗೊಳ್ಳುವ ಇತರೆ ಕೆಲಸ ಕಾರ್ಯ ಗಳಿಗಾಗಿ‌ ಸಮರ್ಪಕ ಅನುದಾನ ನೀಡಲಾಗುತ್ತಿದೆ.

ರೈತರ ನಿರಂತರ ಶ್ರಮವಿದೆ. ಕೃಷಿಯಿಂದ ದೇಶದ ಬೆಳವಣಿಗೆ ಕಾಣಲಿದೆ ಮತ್ತು ತೆರಿಗೆದಾರರಿಗೆ ಅಭಿನಂದನೆಗಳು ಎಂದ ಅವರು, ಎಲ್ಲರೂ ಜಾಗೃತರಾಗಿ ನಡೆಯಬೇಕು ಎಂದು ಸಲಹೆ ನೀಡಿದರು. ಆತ್ಮ‌ನಿರ್ಭರ ಯೋಜನೆಯತ್ತ ಹೆಜ್ಜೆ ಹಾಕೋಣ‌ ಎಂದು ಎಲ್ಲರಿಗೂ ಶುಭ ಕಾಮನೆಗಳನ್ನು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button