ಪ್ರಮುಖ ಸುದ್ದಿ
ಕಂದಾಯ ಸಚಿವರ ಜತೆಯಿದ್ದಾಗಲೇ ಜಿಲ್ಲಾಧಿಕಾರಿಗೆ ವರ್ಗಾವಣೆ ಆದೇಶ!
ಯಾದಗಿರಿ : ಕಂದಾಯ ಸಚಿವ ಆರ್.ಅಶೋಕ್ ಇಂದು ಬೆಳಗ್ಗೆಯಿಂದಲೇ ಯಾದಗಿರಿಯಲ್ಲಿ ಪ್ರವಾಸ ಮಾಡಿದ್ದಾರೆ. ಅಂತೆಯೇ ಅಧಿಕಾರಿಗಳ ಜತೆ ಸಭೆ ಸಹ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕೂರ್ಮರಾವ್ .ಎಂ ಅವರು ಕಂದಾಯ ಸಚಿವರಿಗೆ ಸಾಥ್ ನೀಡಿದ್ದರು. ಆದ್ರೆ, ಮದ್ಯಾನದ ವೇಳೆಗೆ ಡಿಸಿ ಕೂರ್ಮರಾವ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ರಾಗಾ ಪ್ರಿಯಾ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ಆದೇಶಿಸಲಾಗಿದೆ. ಕಂದಾಯ ಸಚಿವ ಆರ್.ಅಶೋಕ ಜಿಲ್ಲೆಗೆ ಆಗಮಿಸಿದ್ದು ಡಿಸಿ ಅವರ ಜತೆಗೆ ಇರುವಾಗಲೇ ವರ್ಗಾವಣೆ ಆದೇಶ ಹೊರಬಿದ್ದಿದ್ದು ಚರ್ಚೆಗೆ ಗ್ರಾಸವಾಗಿದೆ.