ಕ್ಯಾಂಪಸ್ ಕಲರವ

ಕೌಶಲ್ಯ ತರಬೇತಿ ಸದುಪಯೋಗ ಪಡೆಯಿರಿ-ಮಹಾಂತೇಶ

ಜೀವನ ಕೌಶಲ್ಯ ತರಬೇತಿ ಕಾರ್ಯಗಾರ

ಯಾದಗಿರಿ, ಶಹಾಪುರಃ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಯುವ ಸಬಲೀಕರಣ ಇಲಾಖೆ ಯಾದಗಿರಿ ಹಾಗೂ ರಾಷ್ರ್ಟೀಯ ಸೇವಾ ಯೋಜನೆ ಸರ್ಕಾರಿ ಪದವಿ ಪೂರ್ವ ಕಾಲೇಜು ಗೋಗಿ ಇವರ ಸಂಯುಕ್ತಾಶ್ರಯದಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಯೋಜನೆ ಸಂಯೋಜಕ ಮಹಾಂತೇಶ ಕಲಾಲ ಮಾತನಾಡಿ, ಜೀವನ ಕೌಶಲ್ಯ ತರಬೇತಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ವಿವಿಧ ವಸ್ತುಗಳನ್ನು ರೂಪಿಸುವದನ್ನು ಕಲಿಯಬೇಕು. ಹಲವು ಕೌಶಲ್ಯತೆಯನ್ನು ಮೈಗೂಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು.

ವಿವಿಧ ಕೌಶಲ್ಯತೆ ತರಬೇತಿ ಪಡೆದಲ್ಲಿ ಓದು ಮುಗಿದ ನಂತರ ಯಾವಾದರೂ ಸ್ವಯಂ ಉದ್ಯೋಗ ನಡೆಸಲು ಅನುಕೂಲವಾಗಲಿದೆ. ಎಲ್ಲರಿಗೂ ಓದಿದ ನಂತರ ಪದವಿ ಮುಗಿದ ತಕ್ಷಣ ಕೆಲಸ ದೊರೆಯುವದಿಲ್ಲ. ಪ್ರಸ್ತುತ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಕಾಣುತ್ತಿದ್ದೇವೆ. ಯಾವುದೇ ಕೆಲಸ ನಿರ್ವಹಿಸುವದು ಸುಲಭವಲ್ಲ. ಅವರವರ ಕಾರ್ಯ ಕ್ಷಮತೆ ಅದರಲ್ಲಿ ಮುಖ್ಯವಾಗಲಿದೆ.

ಹಲವು ಕೌಶಲ್ಯತೆ ರೂಢಿಸಿಕೊಂಡು ಸಣ್ಣದಾಗಿ ವ್ಯಾಪಾರ ನಡೆಸಲು ಅನುಕೂಲವಾಗಲಿದೆ. ಮುಂದೆ ಅದೇ ವ್ಯಾಪಾರವನ್ನು ಪ್ರಗತಿ ಪಥದತ್ತ ಒಯ್ಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.

ಯುವ ಸ್ವಂದನ ಕೇಂದ್ರದ ಸಿಬ್ಬಂದಿಯಾದ ರಮೇಶ, ರಾಮಲಿಂಗ, ಶಿಲ್ಪಾದೇವಿ, ಶಿಲ್ಪಾ ಭಾಗವಹಿಸಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಜೀವನ ಕೌಶಲ್ಯ ತರಬೇತಿಯನ್ನು ಹಲವು ನಿರ್ದೆಶನಗಳ ಮೂಲಕ ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಎನ್.ಸಿ.ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜು ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಉಪನ್ಯಾಸಕ ಸುರೇಶ ಅರುಣಿ ನಿರೂಪಿಸಿದರು. ಉಪನ್ಯಾಸಕ ಎಂ.ಎಂ.ಹುಂಡೇಕಾರ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button