ಡಿ.26 ರಿಂದ ತೊಗರಿ ಖರೀಧಿ ಆರಂಭ, 6 ಸಾವಿರ ರೂ. ನಿಗದಿ, ರೈತರ ಖಾತೆಗೆ ಜಮೆ
ಕೇಂದ್ರ-5450 ಪ್ಲಸ್ ರಾಜ್ಯದಿಂದ 550 ಒಟ್ಟು 6000 ರೂ.ನಿಗದಿ
ಕಲಬುರ್ಗಿಃ ಡಿಸೆಂಬರ್ 26 ರಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀಧಿ ಆರಂಭಿಸಲಾಗುವುದು. ಪ್ರತಿ ಕ್ವಿಂಟಲ್‍ಗೆ 6 ಸಾವಿರ ರೂಪಾಯಿ ದರ ನಿಗದಿಯಾಗಿದ್ದು, ಕಲಬುರ್ಗಿ, ಬೀದರ, ವಿಜಯಪುರ, ಬಾಗಲಕೋಟ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭವಾಗಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ತೊಗರಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಕ್ವಿಂಟಲ್ ತೊಗರಿಗೆ 5450 ರೂ. ದರ ನಿಗದಿ ಮಾಡಿದೆ. ಅದರಂತೆ ರಾಜ್ಯ ಸರ್ಕಾರ ಕ್ವಿಂಟಲ್ ತೊಗರಿಗೆ 550 ರೂಪಾಯಿ ಪ್ರೋತ್ಸಾಹ ಧನ ನೀಡಲು ಒಪ್ಪಿದ್ದು, ಹೀಗಾಗಿ ಪ್ರತಿ ಕ್ವಿಂಟಲ್ ತೊಗರಿಗೆ 6000 ರೂ.ನಿಗದಿಯಾಗಿದೆ.
ಕೂಡಲೇ ತೊಗರಿ ಖರೀಧಿ ಕೇಂದ್ರ ಆರಂಭವಾಗಲಿದ್ದು, ರೈತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಯು ಮಾಡಲಾಗಿದೆ. ಬೆಂಬಲ ಬೆಲೆ ರೈತರ ಅಕೌಂಟಗೆ ನೇರವಾಗಿ ಜಮೆಯಾಗುವ ವ್ಯವಸ್ಥೆ ಮಾಡಲಾಗಿದೆ. ಖರೀದಿಯಲ್ಲಿ ರೈತರಿಗೆ ಅನ್ಯಾಯವಾಗದಂತೆ ಪಾರದರ್ಶಕ ವ್ಯವಸ್ಥೆ ಕಲ್ಪಿಸಲಾಗಿದೆ. ಆನ್‍ಲೈನ್ ಮೂಲಕ ತೊಗರೆ ಮಾರಾಟದ ನೋಂದಣಿ ಮಾಡಬೇಕು. ಅಕ್ರಮ ತಡೆಯಲು ಆಧಾರ್ ಕಾರ್ಡ್ ಲಿಂಕ್ ಮಾಡಲಾಗುವುದು. ರೈತರ ಅಕೌಂಟಗೆ ನೇರವಾಗಿ ಹಣ ಸಂದಾಯವಾಗುವುದು ಎಂದು ತಿಳಿಸಿದ್ದಾರೆ.