ಪ್ರಮುಖ ಸುದ್ದಿ
ಜೈಲಲಿರುವ ಕವಿ ವರವರರಾವ್ ಹದಗೆಟ್ಟ ಆರೊಗ್ಯ- ಕುಟುಂಬಸ್ಥರ ಆಕ್ರೋಶ
ಹೈದರಾಬಾದ್ಃ ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷದಿಂದ ಜೈಲಿನಲ್ಲಿರುವ ಪ್ರಗತಿಪರ, ಸಾಮಾಜಿಕ ಕಳಕಳಿಯ ಹೋರಾಟಗಾರ ಕವಿ ವರವರರಾವ್ ಅವರ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ನೀಡದ ಮತ್ತು ಉದ್ದೇಶ ಪೂರ್ವಕವಾಗಿ ಗೌಪ್ಯವಾಗಿಟ್ಟ ಸರ್ಕಾರದ ಕ್ರಮವನ್ನು ಖಂಡಿಸಿ ಇದು ಅಮಾನವೀಯ ಎಂದು ಕವಿ ರಾವ್ ಕುಟುಂಬ ಆರೋಪಿಸಿದೆ.
ಮುಂಬೈನ ತಲೋಜಾ ಜೈಲಿನಲ್ಲಿರುವ ಕವಿ ರಾವ್ ಅವರಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಈ ವಾರ ತಿಳಿದು ಬಂದಿದೆ. ಈ ಕುರಿತು ಕುಟುಂಬಕ್ಕೆ ಯಾವುದೇ ಅಧಿಕೃತ ಮಾಹಿತಿ ನೀಡದಿರುವದು ಸರಿಯಲ್ಲ.
ಇದು ಅತ್ಯಂತ ಅಮಾನವೀಯವಾದದು ಎಂದು ಅಲ್ಲಿನ ಸರ್ಕಾರದ ನೀತಿಯನ್ನು ಕುಟುಂಬಸ್ಥರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.