ಪ್ರಮುಖ ಸುದ್ದಿ
ಡಿಕೆಶಿ ಭೇಟಿಯಾದ ಸೋನಿಯಾ ಗಾಂಧಿಯ ರಾಜಕೀಯ ಕಾರ್ಯದರ್ಶಿ
ಡಿಕೆಶಿ ಭೇಟಿಯಾದ ಕಾಂಗ್ರೆಸ್ ಹಿರಿಯ ನಾಯಕರು
ವಿವಿ ಡೆಸ್ಕ್ಃ ದೆಹಲಿಯ ತಿಹಾರ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ ಅವರನ್ನು ಗುರುವಾರ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಹಿರಿಯ ನಾಯಕ ಆನಂದ ಶರ್ಮಾ ಭೇಟಿಯಾದರು.
ಬುಧವಾರ ಡಿಕೆಶಿಯವರ ಪರ ವಕೀಲರು ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ಇಡಿ ನ್ಯಾಯಾಲಯ ವಜಾಗೊಳಿಸಿತ್ತು.
ಭೇಟಿ ಬಳಿಕ ಮಾತನಾಡಿದ ಆನಂದ್ ಶರ್ಮಾ, ಡಿಕೆಶಿಯವರ ಆರೋಗ್ಯ ಕುರಿತು ವಿಚಾರಿಸಿದ್ದೇವೆ. ಅವರ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನ್ಯಾಯ ಸಮ್ಮತವಲ್ಲ. ಅವರು ಕಾನೂನು ಹೋರಾಟ ಮುಂದುವರೆಸಿದ್ದಾರೆ. ನ್ಯಾಯ ಸಿಗುವ ಭರವಸೆ ನಮಗಿದೆ ಎಂದರು. ಭೇಟಿ ವೇಳೆ ಡಿಕೆ ಸುರೇಶ ಜೊತೆಯಲ್ಲಿದ್ದರು ಎನ್ನಲಾಗಿದೆ.