SBI ಬ್ಯಾಂಕ್ ಎದುರು ರೈತರ ನೂಕು ನುಗ್ಗಲು
ರೈತರಿಂದ ದಾಖಲೆ ಸಲ್ಲಿಕೆಗೆ ನೂಕು ನುಗ್ಗಲು
ಯಾದಗಿರಿ, ಶಹಾಪುರಃ ತಾಲೂಕಿನ ಸಗರ ಗ್ರಾಮದ ಎಸ್‍ಬಿಐ ಬ್ಯಾಂಕ್ ಎದುರು ಸರ್ಕಾರ ಸಾಲ ಮನ್ನಾ ಮಾಡಿದ ಹಿನ್ನೆಲೆ ರೈತರು ತಮ್ಮ ದಾಖಲಾತಿ ಸಲ್ಲಿಸಲು ಮತ್ತೇ ನೂಕು ನುಗ್ಗಲು ನಡೆದಿದೆ.
ವಾರದ ಹಿಂದೆಯಷ್ಟೆ ದಾಖಲಾತಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಕರೆ ನೀಡಿದ್ದರು. ಆಗಲೂ ಸಹ ರೈತರು ಬ್ಯಾಂಕ್ ಮುಂದೆ ನೆರೆದಿದ್ದು, ದಾಖಲಾತಿ ಸಲ್ಲಿಕೆಗೆ ನೂಕುನುಗ್ಗಲು ನಡೆಸಿದ್ದರು.
ಆಗ ಅನಾಮಿಕ ಕರೆಯಿಂದ ರೈತರು ಪರದಾಡುವಂತಾಗಿದೆ. ದಾಖಲಾತಿ ಸಲ್ಲಿಸಲು ಯಾವುದೇ ಅಂತಿಮ ದಿನಾಂಕ ನಿಗದಿಯಾಗಿಲ್ಲ ಎಂದು ಬ್ಯಾಂಕ್ ವ್ಯವಸ್ಥಾಪಕರು ಸ್ಪಷ್ಟನೆ ನೀಡಿದ್ದರು.
ಆಗ ರೈತರು ಸಾಲಾಗಿ ನಿಂತು ದಾಖಲಾತಿ ಸಲ್ಲಿಸಿದ್ದರು. ಆಗ ಸಲ್ಲಿಸಿರುವ ದಾಖಲಾತಿಯಲ್ಲಿ ಲೋಪ ದೋಷವಾದ ಹಿನ್ನೆಲೆ ಪ್ರಸ್ತುತ ಮತ್ತೇ ಸಾಲ ಮನ್ನಾ ದಾಖಲಾತಿ ಸಲ್ಲಿಕೆಗೆ ಬ್ಯಾಂಕ್ ಅಧಿಕಾರಿಗಳೇ ತಿಳಿಸಿದ್ದಾರೆ ಎಂದು ರೈತರು ಆರೋಪಿಸಿದ್ದರು.
ಆ ಕಾರಣಕ್ಕೆ ರೈತರು ಮತ್ತೊಮ್ಮೆ ದಾಖಲಾತಿ ಕಾಗರ ಪತ್ರಗಳನ್ನು ಸಲ್ಲಿಸಲು ಪರದಾಡುವಂತಾಗಿದೆ. ಇದು ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷವೆಂದು ರೈತರು ದೂರಿದ್ದಾರೆ. ಅಲ್ಲದೆ ಬ್ಯಾಂಕ್ ಸಿಬ್ಬಂದಿ ಈ ಬಾರಿಯಾದರೂ ಸಮರ್ಪಕವಾಗಿ ದಾಖಲಾತಿಗಳನ್ನು ಪಡೆದುಕೊಳ್ಳಬೇಕು.
ಮತ್ತು ದಾಖಲಾತಿ ಪಡೆದುಕೊಳ್ಳಲು ಸಿಬ್ಬಂದಿ ಹೆಚ್ಚು ಟೇಬಲ್‍ಗಳನ್ನು ಹಾಕಬೇಕು. ಸಮಾಧಾನದಿಂದ ಪಡೆಯವಂತ ವ್ಯವಸ್ಥೆ ಕಲ್ಪಿಸಬೇಕು. ನಿತ್ಯ ಕೃಷಿ ಕಾರ್ಯ ಚಟುವಟಿಕೆಗಳನ್ನು ಬಿಟ್ಟು ಬೆಳಗ್ಗೆಯಿಂದ ರಾತ್ರಿಯವರೆಗೂ ಬ್ಯಾಂಕ್ ಎದುರು ಸಾಲುಗಟ್ಟಿ ನಿಲ್ಲುವಂತಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.