ಪ್ರಮುಖ ಸುದ್ದಿಬಸವಭಕ್ತಿ
ವಿಶ್ವಕರ್ಮ ಏಕದಂಡಿಗಿಮಠದ ಗುರುನಾಥೇಂದ್ರ ಯತಿಗಳು ಬ್ರಹ್ಮಲೀನಃ ಮಡುಗಟ್ಟಿದ ದುಃಖ
ವಿಶ್ವಕರ್ಮ ಏಕದಂಡಿಗಿಮಠದ ಗುರುನಾಥೇಂದ್ರ ಯತಿಗಳು ಬ್ರಹ್ಮಲೀನಃ ಮಡುಗಟ್ಟಿದ ದುಃಖ
ಯಾದಗಿರಿಃ ಇಲ್ಲಿನ ಏಕದಂಡಿಗಿ ಮಠದ ಅತ್ಯಂತ ಹಿರಿಯ ಶ್ರೀ ಗುರುನಾಥೇಂದ್ರ ಸರಸ್ವತಿ ಯತಿವರ್ಯರು ಇಂದು ಶುಕ್ರವಾರ ಆ.28 ಸಂಜೆ 5 ಗಂಟೆಗೆ ಬ್ರಹ್ಮಲೀನವಾಗಿದ್ದು, ಭಕ್ತಾಧಿಗಳಲ್ಲಿ ದುಃಖ ಮಡುಗಟ್ಟಿದೆ.
ವಿಶ್ವಕರ್ಮ ಸಮಾಜದ ಯತಿಗಳಾದ ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿಗಳು ಅಪಾರ ಭಕ್ತರನ್ನು ಸಂಪಾದಿಸಿದ್ದರು. ಸಮಾಜದ ಏಳ್ಗೆಗೆ ಅಭಿವೃದ್ಧಿಗೆ ಅವಿರತ ಶ್ರಮವಹಿಸಿದ್ದರು.
ಅನ್ಯ ಸಮಾಜದ ಭಕ್ತವೃಂದವು ಅವರು ಹೊಂದಿದ್ದಾರೆ. ನಾಳೆ ಕಲಬುರ್ಗಿ ಏಕದಂಡಗಿ ಮಠದಲ್ಲಿ ಇಂದೆ ರಾತ್ರಿ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು. ತದ ನಂತರ ಯಾದಗಿರಿ ಏಕದಂಡಗಿ ಮಠದಲ್ಲಿ ನಾಳೆ ಆ.28 ಸಂಜೆ 5 ಗಂಟೆಗಡ ಯತಿವರ್ಯರ ಅಂತ್ಯ ಸಂಸ್ಕಾರ ಧಾರ್ಮಿಕ ವಿಧಿವಿಧಾನದ ಮೂಲಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.