ನಟ ಸುದೀಪ ಹೆಸರಲ್ಲಿ ಗ್ರಂಥಾಲಯ ಓಪನಿಂಗ್
ಚಳ್ಳಿಕೆರೆಃ ಸುದೀಪ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದ. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಳಯಾಲಂ ಭಾಷೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ಸುದೀಪ್ ಕನ್ನಡದ ಆಸ್ತಿ ಅವರ ಹೆಸರಿನಲ್ಲಿ ಗ್ರಂಥಾಲಯ ಪ್ರಾರಂಭಿಸಿರುವದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ಅಭಿಪ್ರಾಯ ಪಟ್ಟರು.
ಚಳ್ಳಿಕೇರಿ ಸಮೀಪದ ಬೊಂಬೇರಹಳ್ಳಿ ಗ್ರಾಮದಲ್ಲಿ ಚಿತ್ರನಟ ಕಿಚ್ಚ ಸುದೀಪ್ ಹೆಸರಲ್ಲಿ ಸಿದ್ಧತೆಗೊಂಡ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಿಚ್ಚ ಸುದೀಪ್ ಕ್ರೀಡಾ ಸಾಂಸ್ಕøತಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಕೈಗೊಂಡ ಗ್ರಂಥಾಲಯ ಇಂದಿನ ಯುವಕರಿಗೆ ಅನುಕೂಲವಾಗಲಿ. ಮತ್ತಷ್ಟೂ ಉತ್ತಮ ಕಾರ್ಯಗಳನ್ನು ಜನಪೋಗಿ ಕಾರ್ಯಗಳನ್ನು ಸಂಸ್ಥೆ ಕೈಗೊಳ್ಳಲಿ ಎಂದು ಆಶಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಂಥಾಲಯ ಅಗತ್ಯ. ಮೊಬೈಲ್‍ನಲ್ಲೇ ಕಾಲ ಕಳೆಯುವ ಯುವಕರು ಇಂದು ಗ್ರಂಥಾಲಯದಂತ ಶೈಕ್ಷಣಿಕ ಕೇಂದ್ರಕ್ಕೆ ಚಾಲನೆ ನೀಡಿರುವದು ನಿಜಕ್ಕೂ ಮೆಚ್ಚುವಂತಹದ್ದು, ಪ್ರತಿಯೊಬ್ಬರಿಗೂ ಓದು ಬಹು ಮುಖ್ಯ ಜ್ಞಾನವನ್ನು ಸಂಪಾದಿಸುವ ವ್ಯಕ್ತಿ ತನ್ನ ಬದುಕನ್ನು ಅಚ್ಚಕಟ್ಟಾಗಿ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
ಶಿಕ್ಷಕ, ಕಲಾವಿದ ಪರಮೇಶ್ವರಪ್ಪ ಕುದರಿ ಚಿತ್ರ ನಟ ಸುದೀಪ್ ಅವರ ಸಾಧನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಧ್ವನಿ ಸಂಪಾದಕ ಸೊಂಡೆಕೆರೆ ಶಿವಣ್ಣ, ಕಾಂಗ್ರೆಸ್ ಮುಖಂಡ ರವಿಕುಮಾರ, ಪತ್ರಕರ್ತ ಕೊರ್ಲಕೊಂಟೆ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.