ಬಡ ಕುಟುಂಬಕ್ಕೆ ನೆರವಿನ ಭರವಸೆ ನೀಡಿದ ಬಾಲಿವುಡ್ ನಟ ಸೋನು ಸೂದ್
ಬಡ ಕುಟುಂಬಕ್ಕೆ ನೆರವಿನ ಭರವಸೆ ನೀಡಿದ ಬಾಲಿವುಡ್ ನಟ ಸೋನು ಸೂದ್
ಯಾದಗಿರಿ; ಕಳೆದ ೩ ದಿನಗಳ ಹಿಂದೆ ನಗರದ ಸರ್ಕಾರಿ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ೩ ಗಂಡು ಮಕ್ಕಳಿಗೆ ಜನ್ಮ ನೀಡಿದ ಗರ್ಭಿಣಿ ಮಹಿಳೆ ಕುಟುಂಬ ಸಂಕಷ್ಟದಲ್ಲಿದೆ ಎಂಬ ವಿಷಯ ತಿಳಿದ ಬಾಲಿವುಡ್ ಸ್ಟಾರ್ ಸೋನು ಸೂದ್ ನೆರವು ನೀಡುವ ಭರವಸೆ ನೀಡಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿರುತ್ತಿರುವ ರಾಮ ಸಮುದ್ರ ಗ್ರಾಮದ ನಾಗರಾಜ್ ಬೈಲ್ ಪತ್ತಾರ ಹೆಂಡತಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದ, ಆಸ್ಪತ್ರೆಯಲ್ಲಿ ವೈದ್ಯರು ಸಿಜರಿನ್ ಮೂಲಕ ಮಹಿಳೆಯ ಹೆರಿಗೆ ಮಾಡಿದರು. ತಾಯಿ ಮಕ್ಕಳು ಆರೋಗ್ಯದಿಂದ ಇದ್ದಾರೆ.
ನಾಗರಾಜ ಕುಟುಂಬ ಎದುರಿಸುತ್ತಿರುವ ಸಮಸ್ಯೆಯನ್ನು ಸ್ಥಳಿಯ ಪತ್ರಕರ್ತರೊಬ್ಬರು ನಟ ಸೋನು ಸೂದ್ ಗಮನಕ್ಕೆ ತಂದಾಗ ಅವರ ತಂಡದ ಮುಖ್ಯಸ್ಥ ಗೋವಿಂದ ಅಗ್ರವಾಲ ನಾಗರಾಜನ ಜೋತೆ ೩ ಬಾರಿ ಮಾತನಾಡಿ, ಯಾವುದೇ ಕಾರಣಕ್ಕೂ ಆತಂಕ ಪಡಬೇಡಿ ಮೋದಲು ನಾವು ನಿಮಗೆ ೨ ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳ ನೀಡುವ ಜೊತೆಗೆ ಅವರ ಮಕ್ಕಳ ಆರೋಗ್ಯ ಚಿಕಿತ್ಸೆಗೆ ತಗಲುವ ವೆಚ್ಚದ ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದರು. ಇದರಿಂದ ಬಡ ಕುಟುಂಬದಲ್ಲಿ ಕೊಂಚ ನೆಮ್ಮದಿ ಮೂಡಿದಂತಾಗಿದೆ.
ಈಗಾಗಲೇ ನಟ ಸೋನು ಸೂದ್ ಮುಂಬಯಿ ನಗರದಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಹರಡಿದ ಸಂದರ್ಭದಲ್ಲಿ ನಗರದಲ್ಲಿ ಕೆಲಸ ಮಾಡುತ್ತಿರುವ ದೇಶದ ವಿವಿದ ರಾಜ್ಯಗಳ ವಲಸೆ ಕಾರ್ಮಿಕರನ್ನು ಸ್ವಂತ ಖರ್ಚಿನಲ್ಲಿ ಅವರ ಅವರ ಗ್ರಾಮಗಳಿಗೆ ಕಳುಹಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ.