ಬಸವಭಕ್ತಿ
ಸಿಂಗನಳ್ಳಿ ಯಲ್ಲಮಾಂಬೆ ರಥೋತ್ಸವ ಸಂಪನ್ನ
ಯಾದಗಿರಿ, ಶಹಾಪುರಃ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಯಲ್ಲಾಮಾಂಬೆ ಜಾತ್ರೆ ಅಂಗವಾಗಿ ರಥೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು. ರಥೋತ್ಸವಕ್ಕೆ ಆಗಮಿಸಿದ ಭಕ್ತಾಧಿಗಳು ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಶ್ರೀದೇವಿ ಯಲ್ಲಾಮಾಂಬೆ ಹೆರಸಲ್ಲಿ ಜಯಘೋಷಣೆಗಳು ಮೊಳಗಿದವು.
ಇದೇ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತಾಧೀಗಳು ಉತ್ತುತ್ತಿ ಬಾಳೆಹಣ್ಣು ರಥದ ಮೇಲೆ ಎರಚುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಮುಂಚಿತವಾಗಿ ಶ್ರೀರಾಮಲಿಂಗೇಶ್ವರ ಮಠದ ಕುಮಾರಸ್ವಾಮಿ ಮತ್ತು ಬಸಯ್ಯ ಸ್ವಾಮಿ ಚಾಮನಾಳ ಅವರಿಂದ ರಥತೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಮುಖಂಡರಾದ ನಿಂಗಣ್ಣಗೌಡ ಹೊಸಮನಿ ಇತರರಿದ್ದರು.